...

3 views

ಆ ದಿನಗಳೇ ಚೆಂದ..
ತುಸು ಮಾತು ಹುಸಿ ಕೋಪ
ತುಂಬಿರುವ ಜೀವನದ
ಬಿಂಬ ಗೆಳತೀ..
ಮೆಲು ನುಡಿಯ ಮೃದು ನಡೆಯ
ಹಿತವಾದ ಅನುಭವವು
ದಿನವಿಡೀ ಗೆಳತೀ..॥
ತಣ್ಣನೆಯ ಗಾಳಿ ಹದವರಿತು ಬೀಸಿ
ಮುಖದ ತುಂಬ
ಮುಗುಳ್ನಗೆಯು ಗೆಳತೀ..
ಬಾನಂಗಳದ ಬಾನಾಡಿಯಂತೆ
ಸ್ವಚ್ಛಂದವಾಗಿ ಹಾರಾಡಿ
ವಿಹರಿಸಿದೆವು ಗೆಳತೀ..॥
ಆ ದಿನಗಳೇ ಚೆಂದ ಬಾಳ ಪಯಣದಲಿ
ಮರಳಿ ಬಾರದ ಯೌವನದ
ತೆರದಿ ಗೆಳತೀ..
ಇಂದು ಜೀವನದ ಸಾಗರದಿ
ಅಲೆಗಳ ಹೊಡೆತಕ್ಕೆ
ಸಿಲುಕಿಹೆವು ಗೆಳತೀ..॥
ಬಂದುದನು ಬಂದಂತೆ ಸ್ವೀಕರಿಸಿ
ಚೆಂದದಲಿ ಬಾಳ ಕಾಣುತ
ಮುಂದೆ ಸಾಗೋಣ ಗೆಳತೀ..
ಕಷ್ಟಗಳ ಪರಿಹರಿಸಿ ಸುಖವ ಹಂಚುತ್ತ
ನಗುನಗುತ ಬಾಳ ಪಥದಲಿ
ನಡೆಯೋಣ ಗೆಳತೀ..॥
17-4-24