...

11 views

ಶೀರ್ಷಿಕೆ:ಅಪ್ಪನ ಪ್ರೀತಿಯ ಮಗಳು (ಚಿತ್ರ ಕವನ)
ಅಪ್ಪನ ಪ್ರೀತಿಯ ಮಗಳು ಜಾನಕಿ
ಮಾಡುವಳು ದಿನಾ ಬಲು ಶೋಕಿ
ಅಪ್ಪನ ಕೈಯಿಂದ ತೆಗೆದು ಕೊಂಡಳು ಕಾರು ಕೀ
ಜಬರ್ದಸ್ತ್ ಹೊರಟವಳ ಕಾರು ರೋಡಲ್ಲಿ ಬಾಕಿ//

ಕಾರಿನ ಚಕ್ರವೊಂದು ಆಯ್ತು ಪಂಕ್ಚರ್
ಗ್ಯಾರೇಜಿನ ಗೋಪಾಲಣ್ಣನಿಗೆ ಅವಳ ಟಾರ್ಚರ್
ಹುಡುಗಿ ನೋಡಲು ಬಹಳ ಸ್ಟ್ರಾಂಗರ್
ಆದರೆ ಅಂದು ಕೆಟ್ಟಿತಲ್ಲಿ ವೆದರ್//

ಗೋಪಾಲಣ್ಣ ಪಂಕ್ಚರ್ ಹಾಕಲು ಬರಲೇ ಇಲ್ಲ
ಜಾನಕಿ ಕಾದು ಸುಸ್ತಾದಳು ದಿನವೆಲ್ಲಾ
ಮೊಬೈಲಲ್ಲೇ ಕಳೆದಳು ಸಮಯವೆಲ್ಲ
ಬೇಜಾರಲ್ಲಿ ಕಳೆಗುಂದಿತು ಅವಳ ಸಿಹಿಗಲ್ಲ//

ನಲ್ಲನ ಭೇಟಿಗಾಗಿ ಹೊರಟವಳ ಪರಿಸ್ಥಿತಿ
ರೋಡಲ್ಲಿ ಕಾರನ್ನು ಕಾಯುವುದಾಯ್ತು ಅವಳ ಸ್ಥಿತಿ
ಯಾರಿಗೂ ಬರಬಾರದು ಈ ಗತಿ
ಆದರೆ ಅವಳಿಗೆ ಜಂಭವೇ ಒಡತಿ//

ನಲ್ಲನ ನೋಡದೆ ಮನದಲಿ ಪೀಕಲಾಟ
ಆದರೆ ಕೆಟ್ಟಿತಂದು ಸಮಯದಾಟ
ಬದುಕಲ್ಲಿ ಕಲಿತಳವಳು ಒಳ್ಳೆ ಪಾಠ
ಕೊನೆಗೆ ಏನು ಮಾಡಲಾಗದೆ ಮನೆ ಕಡೆ ಅವಳ ಓಟ//

ಸವಿತಾ ಸತೀಶ್ ಶೆಟ್ಟಿ