...

8 views

"ನಗು ನಗುತಾ"
ನಿನ್ನ ನೋಡಿ ನಕ್ಕವರಿಗೆ
ನೀ ನಗುವಾದೆ..
ನೀ ನಗಿಸುತಲೇ ಹಲವರಿಗೆ
ನಗುವಾದೆ..;

ಬಿಕ್ಕಳಿಸಿ ನಗುವ ನಗು
ಕಿಕ್ಕಿರಿಸಿ ನಗುವ ನಗು
ಮುಕ್ಕರಿಸಿ ನಗುವ ನಗು
ಮುಗುಳ್ನಗುವ "ಮಂದಸಿರಿ" ನಗು

ತಿಳಿ ನಗುವಿನಾಚೆಗೆ "ಮನ"
ಮರೆಮಾಚುವಂತ ನಗು...,
ತುಟಿ ಬಿಚ್ಚಿ ನಗುವಂತಹ
ಪುಟಿದೇಳುವ ನಗು...;

ನಗು ನಗಬೇಕೇನಿಸುವಾಗ
ನಗುವಂತಹ ನಗು...
ನಗು ಜಗ ಮೆಚ್ಚಿಸುವಂತಹ
ಜನ ಮೆಚ್ಚಿದ ನಗು,

ನೋವನುಂಡು
ನಗಿಸುವ ನಗು....
ನೋವನೆ ಬಳಸಿ ಆಡುವ ನಗು..

ಪರಿ ಹಾಸ್ಯ ಪರರಿಗಾದರೆ
ಅಪಹಾಸ್ಯ ಹಲವರಿಗಾದರೆ
ನಗುವು ಮೈಮರೆತು ನಗುತಿಹುದು
ನೋಡು...;

ನಗಿಸಿ ನಗುವ ನಗಿಸುವಾತನ
ನೆನೆವ ಜನರಿರುವುದು ನಗುವುದಕ್ಕೆ ಮಾತ್ರ
ನಗಿಸುವವನ ನೋವ ಅರಿಯುವುದಕ್ಕಲ್ಲ...;

"ನೋಡುಗರಿಗೆ ನಗಿಸುವವನು
ಜೋಕರ್ ಅಷ್ಟೇ" ನೊಂದು ನಗಿಸಿದವನಲ್ಲ


"ನಗು ಎಲ್ಲರಿಗು ಇರಲಿ ನಗಿಸುವವನು ನಿಮ್ಮವನಾಗಿರಲಿ".....


-ಆತ್ಮೀಯ (ನಗಿಸಿ ನಗುವವನು)