...

3 views

ಮರಣ
ಜೀವ ಜನನದಿ ಹಿಗ್ಗು
ನೋವು ನಲಿವಿನ ಗುದ್ದು
ಬದುಕಿನ ಅನುದಿನವೂ ಸದ್ದು॥
ಬಸವಳಿದು ಬೆಂಡಾದ ಜೀವ
ಎಳೆಯುತಿದೆ ಬಾಳ ಬಂಡಿಯ
ಬಾಳಿನಾ ಕೊನೆಯ ಚಣದವರೆಗೂ॥
ಮರಣವೆನ್ನುವುದು
ಹುಟ್ಟಿರುವ ಜಗದ ಜೀವಕೆ
ಅನಿವಾರ್ಯ ಕರ್ಮವದು॥
ವಿಳಾಸ ನೀಡದಿದ್ದರೂ
ಕರೆ ಬರಲು ಹೊರಡುವ
ಸಂದಿಗ್ಧ ಸ್ಥಿತಿಯದು॥
ವಿಧಿ ಬರೆದು ಕಳುಹಿಸಿದ
ಬರಹ ಗುಪ್ತವಾಗಿರಲು
ಮುಂದೂಡಲಾಗದು॥
ಕ್ಷಣಿಕ ಬಾಳಿನ ರೀತಿ
ಇರುವಷ್ಟು ದಿನ ಉನ್ನತಿಯ
ಪಡೆದು ಸಾರ್ಥಕತೆಯಲಿ ಬಾಳು

Related Stories