...

6 views

ಮಳೆಹನಿ
ಗಗನದೊಡಲಲಿ ಮುಗಿಲಮಾಲೆಯು
ಕಣ್ಣಿಗಂದವ ನೀಡಿದೆ
ಮಳೆಯ ಬರವಿನ
ಸುಳಿವ ಕಂಡು
ಮನವು ಹರುಷವ ತಳೆದಿದೆ॥
ಭೂಮಿತಾಯಿಯ
ಒಡಲ ಧಗೆಯದು
ತಣಿಯದಾಗಿದೆ ಇರುಳಲಿ
ಜೀವಕೋಟಿಯ
ಬದುಕ ಬವಣೆಯ
ಸಹಿಸದಾಗಿದೆ ಅನುದಿನ॥
ಜನರ ಕಷ್ಟವ
ನೋಡಲಾರದೆ
ದೇವ ಮಳೆಯನು ಸುರಿಸಿದ
ಮಳೆಯ ಸ್ಪರ್ಶಕೆ
ಇಳೆಯು ಹರುಷದಿ
ಹೊಸತು ರೂಪವ ತಾಳಿತು॥
ಮುತ್ತಿನಂದದ
ಹನಿಗಳೆಲ್ಲವು
ಮೆಲ್ಲನಿಳೆಯನು ಸೋಕಿತು
ಹನಿಯ ಸತ್ವವ
ಪಡೆದ ಗಿಡದಿ
ಹಸಿರು ಮೂಡಿತು ಮೆಲ್ಲಗೆ॥






Related Stories