...

7 views

Bigboss Kannada Season 10ರ ವಿಜೇತರು : "ಕಾರ್ತಿಕ್ ಮಹೇಶ್" - ಇದು ತ್ರಿಕೋನ ಸ್ನೇಹಕತೆ
Bigboss Kannada Season 10ರ ವಿಜೇತರು : "ಕಾರ್ತಿಕ್ ಮಹೇಶ್" - ಇದು ತ್ರಿಕೋನ ಸ್ನೇಹಕತೆ

ಅವರಿವರ ಮನೆ ಜಗಳ‌ ನೋಡುವುದೆಂದರೆ ಜನರಿಗೆ ಎಲ್ಲಿಲ್ಲದ ‌ಆಸಕ್ತಿ. ಸಮಯ ‌ಕಳೆಯಲು ಅಥವಾ ಸಮಯ ಹಾಳು ‌ಮಾಡಲು ಅವರಿವರ ಮನೆ ವಿಷಯವನ್ನೇ ಆಡುತ್ತ ಕುಳಿತುಕೊಳ್ಳುವುದು. ಅಲ್ಲಲ್ಲಿ ಬತ್ತಿ ಇಡುವ ಕೆಲಸ, ಜಗಳ ಮಾಡುವಾಗ ಉಬ್ಬಿಸುವ ಕೆಲಸ ಎಗ್ಗಿಲ್ಲದೇ ನಡೆಯುತ್ತದೆ. ಇನ್ನೊಬ್ಬರ ತಪ್ಪನ್ನು ಹುಡುಕಿ ಆಡಿಕೊಳ್ಳಲು ಮುಂದೆ ಬರುತ್ತಾರೆ. ಅವರಿವರ ತಪ್ಪು ಹುಡುಕಿ ಬೈಯುವುದೆಂದರೆ ಏನೋ ಒಂದು ತರಹ ಮಜಾ ಬರುವುದು. ಇದನ್ನೇ ಬಂಡವಾಳ ಮಾಡಿಕೊಂಡು ಬಹುಭಾಷೆಯಲ್ಲಿ ಶುರುಮಾಡಿದ ರಿಯಾಲಿಟಿ ಶೋ ಬಿಗ್ಬಾಸ್..


ಅಸಮರ್ಥರು ಎಂದು ಹಣೆಪಟ್ಟಿ ಕಟ್ಟಿಕೊಂಡು ಬಿಗ್ ಬಾಸ್ ಮನೆಯೊಳಗೆ ‌ಕಾಲಿಟ್ಟ ಕಾರ್ತಿಕ್ ವಿನಯ್ ತನಿಷಾ ಸಂಗೀತಾ ಇನ್ನುಳಿದ ಕೆಲವರು ಬಹಳ ಒಗ್ಗಟ್ಟಿನಿಂದ ಆಡುತ್ತಿದ್ದರು. ಕಾರ್ತಿಕ್ ಹಾಗೂ ಸಂಗೀತಾ, ತನಿಷಾ ಅವರ ಸ್ನೇಹ ಜನಮನ‌ ಗೆಲ್ಲಲು ಯಶಸ್ವೀಯಾಗಿತ್ತು. ಆದರೆ
ಸಡನ್ ಆಗಿ ಸಂಗೀತಾ ವಿನಯ್ ಟೀಮ್ ಗೆ ಬಂದು ಕಾರ್ತಿಕ್ ಅವರನ್ನು ದೂರಲು ಶುರುಮಾಡಿದರು. ನಂತರ ಮತ್ತೆ ಕಾರ್ತಿಕ್ ಟೀಮ್ ಗೆ ಹೋದರು.
ಮನೆಯವರ ಭೇಟಿಯಾದ‌ ಮೇಲಂತೂ ಸಂಗೀತಾ ಒಬ್ಬರೇ ಆಡಲು ಶುರುಮಾಡಿದರು. ಕಣ್ಣು ನೋವಾದ ಪ್ರಸಂಗದ ನಂತರ ಕಾಳಜಿ ಮಾಡಿದ ಪ್ರತಾಪ್ ತಮ್ಮಾನಾಗಿ ಬದಲಾದ.
ಇದೆಲ್ಲದರ ನಡುವೆ ತನಿಷಾ ಕಾರ್ತಿಕ್ ಸ್ನೇಹ ಹಾಗೆಯೇ ಉಳಿಯಿತು. ಕಾರ್ತಿಕ್ ತೀರ ಭಾವುಕ ಮನುಷ್ಯ. ಸಂಗೀತಾ ಅವರು ಹಂಗಿ‌ಸಿ ಆಡುವ ಮಾತಿಗೆ ದುಃಖಿಸುತ್ತಿದ್ದರು. ಆಗೆಲ್ಲ  ಧೈರ್ಯ ಹೇಳುತ್ತಿದ್ದವರು *ತನಿಷಾ*.

ಸಂಗೀತಾ ಅವರದ್ದು ಡಾಂಮಿನೇಟಿಂಗ್ ಗುಣ. ಅಂದರೆ ತನ್ನ ಮಾತೇ ‌ಕೇಳಬೇಕು. ತಾನೆ ಟೀಮ್ ಲೀಡ್ ಮಾಡಬೇಕು ಎಂಬುದು. ಅವರ ಅಭಿಮಾನಿಗಳು ಅದು ಸ್ವಾಭಿಮಾನ, ಧೈರ್ಯವಂತೆಯ ಲಕ್ಷಣ ಎನ್ನುವರು‌. ಸಿಂಹಿಣಿ ಎಂದು ಕರೆದರು. ಎಷ್ಟು ಕಾಲ ಕೇಳಬಹುದು. ತನಿಷಾ, ಕಾರ್ತಿಕ್ ಯಾವಾಗ ವಿರೋಧಿಸಿದರೋ ಆಗಲೇ ಸಂಗೀತಾ ತಿರುಗಿ ಬಿದ್ದರು.

ಅಮ್ಮ ಹಾಗೂ ತಂಗಿಗಾಗಿಯೇ ಬದುಕುವ ಕಾರ್ತಿಕ್ ಗೆ ಬಿಗ್ ಬಾಸ್ ಮನೆಯೊಳಗಿನ ಪ್ರತಿಸ್ಪರ್ಧಿ ಸಂಗೀತಾ ಕೇವಲ ಹಗೆತನವಿಟ್ಟುಕೊಂಡು, ಅವನ ವ್ಯಕ್ತಿತ್ವವನ್ನು ಹಾಳು ಮಾಡುವ ತಂತ್ರ ಹೂಡಿದರು ಕೂಡ ಅದು ಫಲಿಸಲಿಲ್ಲ. ಅವನು ಜೊಲ್ಲು ಸುರಿಸುತ್ತಾನೆ, ಆಟಕ್ಕಾಗಿ ಹೆಣ್ಮಕ್ಕಳ Use ಮಾಡಿಕೊಂಡಿದ್ದಾನೆ ಎಂದು ಸಂಗೀತಾ ದೂರು ಹಾಕಿದರು. ಪಂಚ್ ಮಾಡಿದರು. ಅದು‌ ಸಂಗೀತಾ ಮಾತ್ರ ಹೇಳಿದ್ದು. ತನಿಷಾ , ನಮೃತಾ ಹೇಳಲಿಲ್ಲ. ಅವನೊಬ್ಬ ಒಳ್ಳೆಯ ಮನಸ್ಸುಳ್ಳ ಫ್ರೈಂಡ್ ಎಂದು ಎಲ್ಲರಿಗೂ ಗೊತ್ತು. ವಿನಯ್, ಮೈಕಲ್, ತುಕಾಲಿ ನಮೃತಾ ತನಿಷಾ ಅವರನ್ನೇ ಕೇಳಿನೋಡಿ.

ಅತಿಯಾದ ಹಗೆತನ ಒಳ್ಳೆಯದಲ್ಲ. ಹಾಗಾಗಿ ಸಂಗೀತಾಗೆ ಓಟು ಕಡಿಮೆಯಾಯಿತು. ಅದು ಸಂಗೀತಾಗಿದ್ದ ದ್ವೇಷ. ಕಾರ್ತಿಕ್( ಮಡಿಕೆ) ತಲೆ ಒಡೆದ ಎಂಬ ಕಾರಣಕ್ಕೆ‌. ಇನ್ನು ಮುಂದೆ ಕಾರ್ತಿಕ್ ಜೊತೆಗಿದ್ದು ಆಡುವುದಕ್ಕಿಂತ ವಿರೋಧಿಯಾಗಿ ಆಡಿದರೆ‌ ತಾನು ಗೆಲ್ಲಬಹುದು ಎಂಬ ಲೆಕ್ಕಾಚಾರ.

೧) ಹೆಣ್ಮಕ್ಕಳನ್ನು ಯೂಸ್ ಮಾಡಿಕೊಳ್ತಿದ್ದ ಎಂಬ ಆರೋಪ ಮಾಡಿದ್ದು.
೨) ಕೊನೆಯ ಕ್ಷಣದವರೆಗೂ ಕಾರ್ತಿಕ್ ನ ಮಾತನಾಡಿಸದೇ ಇದ್ದದ್ದು.
೩) ಟಾಪ್ ಆರಕ್ಕೆ ಇಳಿಸಿ ನಿಲ್ಲಿಸಿದ್ದು ಅವನೊಬ್ಬ ಸಮರ್ಥ ಪ್ರತಿಸ್ಪರ್ಧಿ ಎಂದಲ್ಲ ಬದಲಾಗಿ ಗುಣ ಒಳ್ಳೆಯದಿಲ್ಲ ಎಂಬ ಕಾರಣಕ್ಕೆ. ಅದು Valid Reason ಅಲ್ಲವೇ ಅಲ್ಲ.
೪) ಅವನು ಮಾಡುವ ಟೀ ಕೂಡ ಕುಡಿಯದೇ ಇರುವುದು. ಸುದೀಪ್ ಸರ್ ಕೇಳಿದಾಗಲೂ ಹಾಗೆ ಹೇಳಿದ್ದು, (ಎರಡೂ ಕಾರಣ )ಅವರು ಇಷ್ಟ ಇಲ್ಲ ಎಂದು ಟೀ ಕುಡಿಯೋದಿಲ್ಲ,  ಈ ಹೊತ್ತಿನಲ್ಲಿ ಟೀ ಕುಡಿಯೋದಿಲ್ಲ.
೫) ಕಿರಿಕ್ ಕೀರ್ತಿ ಕೇಳಿದಾಗಲೂ ಸಂಗೀತಾ "ನಾನಿಲ್ಲಿ ಯಾರ ಸ್ನೇಹ ಬೆಳೆಸಲು ಬಂದಿಲ್ಲ‌, ಕಪ್ ಒಂದೇ ಮುಖ್ಯ. ಹೊರಗೆ ಹೋದ‌ ಮೇಲೂ ಯಾರ ಸ್ನೇಹವೂ ಮುಂದುವರಿಸುವುದಿಲ್ಲ ಎಂದು ತುಂಬಾ ಸಲಿ ಹೇಳಿದ್ದು.
೬) ಸಿಂಪತಿ ಕಾರ್ಡ್ ಎಂದಲ್ಲ ಆದರೆ ಹೊರಗಿನ ವಿಷಯ ತಿಳಿದ ಮೇಲೆ ಪ್ರತಾಪ್ ಸಂಗೀತಾ ಇಬ್ಬರೂ ಚುರುಕಾಗಿದ್ದರು.

ಇದು ವ್ಯಕ್ತಿತ್ವದ ಶೋ ಆದ ಕಾರಣವೇ ಜನರು ಕಾರ್ತಿಕ್ ಅವರಿಗೆ ಹೆಚ್ಚು ಓಟು ಹಾಕಿದರು. ಕಾರ್ತಿಕ್ ಗೆದ್ದರು. ಯಾರು ಹೇಗೆ ಎಂದು ಜನ ನೋಡುತ್ತಿದ್ದಾರೆ. ಅತಿಯಾ‌ದ ಹಗೆತನ ಒಳ್ಳೆಯದಲ್ಲ. ಒಂದು ರೀತಿಯಲ್ಲಿ ವಿನಯ್ & ಸಂಗೀತಾನೆ ಕಾರ್ತಿಕ್ ಗೆಲ್ಲುವ ಹಾಗೆ ಮಾಡಿದ್ದು. ಅವರ ಅತಿಯಾದ ದಾಳಿ, ಬೈಗುಳ ಮನ ನೋಯಿಸುವಂತೆ ಬೈಯುವುದು ಜನರಿಗೆ ಹಿಡಿಸಲಿಲ್ಲ. ಆದರೆ ಅದು ಭಿಕ್ಷೆ ಅಲ್ಲ‌.

ಕಾರ್ತಿಕ್ ಗೆ ತನಿಷಾ ನಮೃತಾ ಬೈದಿದ್ದರು, ನಿಜ‌.‌ ಆದರೆ ಮನೆಯಿಂದ ಹೊರ ಬಂದ ಮೇಲೆ ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡಿದ್ದಾರೆ. ಆ ವಿಷಯ ತಿಳಿಯದ ಸಂಗೀತಾ "ಅದನ್ನು ಸೇರಿಸಿಕೊಂಡು ಹೆಣ್ಮಕ್ಕಳನ್ನು ಉಪಯೋಗಿಸಿಕೊಂಡು ಆಟ ಆಡಿದ" ಎಂಬ ಆರೋಪ ಮಾಡಿದ್ದಾರೆ. ಪೂರ್ವಾಗೃಹಪೀಡಿತ ಎಂದು ಇದಕ್ಕೆ ಹೇಳುವುದು. ಅವರ ಅಭಿಮಾನಿಗಳು ಜೊಲ್ಲು ಎಂದು ಕಮೆಂಟ್ಸ್,  ವಿಡಿಯೋ ಹಂಚಿದರು. ಪೇಯ್ಡ್ ಪ್ರಮೋಷನ್ ನಡೆದಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಅದು ಅವರವರ ವಿಷಯ ಬಿಡಿ.


ಕಾರ್ತಿಕ್ ತುಂಬಾ ಭಾವುಕ ಮನುಷ್ಯ. ಅವನಿಗೆ ಗೆಲುವಿನ ಜೊತೆಗೆ ತಾಯಿಗೊಂದು ಗೂಡು ಕಟ್ಟಿಕೊಡುವ ಬಹುದೊಡ್ಡ ಕನಸಿತ್ತು. ತಂಗಿಯ ಹೆರಿಗೆ ಸಮಯದಲ್ಲಿ ಅಲ್ಲಿರಲಿಲ್ಲ ಎಂಬ ಬೇಸರ ಆಗಾಗ್ಗೆ ಕಾಡುತ್ತಿದ್ದ ಕಾರಣ ಅಲ್ಲಲ್ಲಿ ಕುಗ್ಗಿ ಹೋಗುತ್ತಿದ್ದ. ಜೊತೆಗೆ ಒಳಗಿರುವ ಸ್ಪರ್ಧಿಗಳ ಒತ್ತಡ, ಕೊಂಕು ಮಾತುಗಳು, ಮನಸ್ಸನ್ನು ಕುಗ್ಗಿಸಿದ್ದು ನಿಜ‌.‌ ಆದರೆ ಆಟದಲ್ಲಿ ಎಲ್ಲೂ ಬಿಟ್ಟು ಕೊಡಲಿಲ್ಲ‌. ವಿನಯ್ ಹಾಗೂ ಸಂಗೀತಾ ಬಹಳ ‌ಚೆನ್ನಾಗಿ ಆಡಿದರೂ ಅವರಿಗೆ ಕಪ್ ಮೇಲೆ ಮೋಹ ಇತ್ತು.

ಇನ್ನೊಂದು ಕಡೆಯಿಂದ:

ವಿನಯ್ ಹಾಗೂ ಕಾರ್ತಿಕ್ ಸ್ನೇಹ ಜನರಿಗೆ ಬಹಳ ಆಪ್ತವಾಯಿತು. ಕಾರಣ ಅವರು ಆಟದ ಸಮಯದಲ್ಲಿ ಎಷ್ಟು ಜಗಳ‌ಮಾಡಿಕೊಂಡರೂ ಏನೇ ವಾಗ್ವಾದ ಮಾಡಿದ್ದರೂ ಅದು ಕೇವಲ‌ ಆಟದ ಸಮಯದಲ್ಲಿ ಮಾತ್ರ. ಆದರೆ ಸಂಗೀತಾ  ಆಟ ಮುಗಿದ ಮೇಲೂ ಹಗೆ ಸಾಧಿಸುತ್ತಿದ್ದಳು.‌ ಮಾತನಾಡುವುನ್ನೇ ನಿಲ್ಲಿಸಿದ್ದಳು. ಅದು ಜನರಿಗೆ ಅರ್ಥವಾಯಿತು.
💐🍁💐🍁💐
That's Great.  ಕಾರ್ತಿಕ್ ತಲೆ ಬೋಳಿಸಿಕೊಂಡಾಗ , ವಿನಯ್ ಗಡ್ಡ ಮೀಸೆ ತೆಗೆಸಿದ್ದರು. ಅದು Actual Friendship ಅಂದ್ರೆ.  (#ಗಂಡ್_ಹೈಕ್ಳು... ಯಾವತ್ತಿದ್ದರೂ ಒಂದೇ.. )ಆವತ್ತಿನಿಂದ ವಿನಯ್ ಜನರ ಮನಸ್ಸನ್ನು ಗೆಲ್ಲಲು ಶುರುಮಾಡಿದರು. ಅವರ ಸ್ನೇಹ ಬದಲಾಗಲಿಲ್ಲ. ಆಟವೆಂದು ಬಂದಾಗ ವಿರುದ್ಧವಾಗಿ ನಿಂತು ಆಡಿದ್ದರು. ಅದೇ ಟ್ರಿಕ್ಸ್ ಸಂಗೀತಾ ಉಪಯೋಗಿಸಿದಾಗ ವೀಕ್ಷಕರಿಗೆ ಇಷ್ಟ ಆಗಲಿಲ್ಲ.
ಕಾರ್ತಿಕ್  ನಿಮ್ಮ ಸಿನಿ ಬದುಕು ಉಜ್ವಲವಾಗಿರಲಿ. ಕನ್ನಡ ಸಿನೆಮಾ ಇಂಡಸ್ಟ್ರಿ ಯಲ್ಲಿ ಇರಬೇಕಾದರೆ ಎಮೋಷನಲ್ ಆಗಬಾರದು. Be STRONG. ALL THE BEST. TAKE CARE. ಜಾಗೃತಿ.

ಸಂಗೀತಾ ಒಬ್ಬ ಬಿಗ್ ಬಾಸ್ ಸ್ಪರ್ಧಿ. ಹಾಗಾಗಿ‌ ವೀಕ್ಷಕರಾದ ನಾವು ಒಂದಷ್ಟು ಮಾತನಾಡಬಹುದು. ಇನ್ನು ಅವರು ನಟಿಯಾಗಿ ನಮ್ಮ ಮುಂದಿರುತ್ತಾರೆ. ಅವರ ಸಿನೆಮಾ‌ ನೋಡಿ ಅಭಿಪ್ರಾಯ ಹೇಳಬೇಕಷ್ಟೆ. ಇನ್ನು ಬಿಗ್ ಬಾಸ್ ನ ಕತೆ ಹೇಳುವುದನ್ನು ನಿಲ್ಲಿಸೋಣ. ಅವರ ವೃತ್ತಿ ಜೀವನ ಚೆನ್ನಾಗಿರಲಿ ಎಂದು ಆಶಿಸೋಣ.

ಶುಭಹಾರೈಕೆಗಳು💐

ಸಿಂಧು ಭಾರ್ಗವ ,ಬೆಂಗಳೂರು🍁
ಲೇಖಕರು.


© Writer Sindhu Bhargava