...

6 views

ಒಲವೇ ಒಲವೇ...
ಒಲವೇ


ಒಲವೇ ಒಲವೇ ಕರಗಿ ಹೋಗದಿರು
ನಿನ್ನ ದುಡಿಮೆಯಲೇ ಮುಳುಗಿ ಹೋಗದಿರು..
ಯಂತ್ರವಾಗದಿರು, ಮಂತ್ರಮುಗ್ದಗೊಳಿಸುವ ಪ್ರೀತಿ ಕಾಯುತಿರುವಾಗ
ಅತಂತ್ರವಾಗಿ ಹಾರಿಹೋಗುವ ತರಗೆಲೆಯಾಗದಿರು...

🏵💮🌸🌹🏵💮🌸🌳🌲🌱

ಮರವ ತಬ್ಬುವುದು ಲತೆಯಂತೆ
ಲತೆಯ ಬೆಚ್ಚಗಿನ ಅಪ್ಪುಗೆಗೆ
ಸೋತ ಮರದ ನಾಚಿಕೆ ಕಂಡವರಿಲ್ಲ..
ಕಡಲ ಸೇರಲು ನದಿ ಓಡೋಡಿ ಬರುವುದಂತೆ..
ಅದು ಒಂದುದಿನ ಬಾರದೇ ಹೋದರೂ
ಚಡಪಡಿಸುವ ಕಡಲ ಮನದಾಳವ
ಅರಿತವರಿಲ್ಲವಂತೆ...
ಇಲ್ಲಿ ಕಣ್ಣಿಗೆ ಕಾಣುವ ಪ್ರೀತಿಗಿಂತ
ಕಾಣದೇ ಇರುವ ಪ್ರೀತಿಯೇ ಬಲುಸೊಗಸು!!(೨)

₹ಸಿಂಧು ಭಾರ್ಗವ ಬೆಂಗಳೂರು
© Writer Sindhu Bhargava