...

5 views

ಒಂಟಿ ಬದುಕು
ಒಂಟಿ ಬದುಕು

ಒಂಟಿ ಬದುಕಿಗೆ
ಪ್ರೀತಿಯೇ ಮೂಲಾಧಾರ
ಅದೊಂದು ಹೃದಯ
ಇರಬೇಕಿತ್ತು ಹತ್ತಿರ..

ನನಗಾಗಿ, ನನ್ನೆಲ್ಲ
ಮಾತನ್ನು ಕೇಳಿಸಿಕೊಳ್ಳಲು
ಕಣ್ಣಲ್ಲಿ ಕಣ್ಣಿಟ್ಟಾಗ
ಎದೆಬಡಿತವ ಅರಿತುಕೊಳ್ಳಲು..

ಯಾರೂ ಇಲ್ಲ ಜೊತೆಗೆಂಬ
ಕೊರಗೊಂದನ್ನು ನೀಡಿಬಿಟ್ಟ..
ಒಲವಿನ ಪ್ರತಿ ಹಾಡಿನಲ್ಲೂ
ಅವನ ಹುಡುಕುವಂತೆ ಮಾಡಿಬಿಟ್ಟ..

ಈ ಸಿನೆಮಾ ಹಾಡಿಗೇನು ಬರ
ಮೇಲಿಂದ ಮೇಲೆ
ದಾಳಿ ಮಾಡುವವು
ಅವನಿಲ್ಲದ ಖಾಲಿತನ
ಮಂಜಿನ ಮಹಲಿನಲ್ಲಿ
ಕುಳಿತಂತೆ ಮಾಡಿಬಿಡುವುದು..

ಮುಂಜಾನೆಯ ಕನಸಿನಲ್ಲಿ
ನೀ ಬರುವೆ ಎಂದಾದರೆ
ಅಂತಹ ಕನಸೆಲ್ಲವೂ
ನಿಜವಾಗುವುದಿಲ್ಲ ಏತಕೆ??

ಹುಣ್ಣಿಮೆಯ ಚಂದಿರನ
ನೋಡಿ ಕವಿತೆ
ಮೂಡುವುದಾದರೆ
ಆ ಕವಿತೆಗೆ ಜೀವ
ಬರುವುದಿಲ್ಲವೇತಕೆ??

ವರುಷಗಳು ಕರಗಿ ಹೋಗುತಲೇ
ಮನದಲ್ಲಿ ನೀ ಬೇರೂರಿದೆಯಲ್ಲ..
ನೀನೇ ಬೇಕು ಎಂಬ ಹಟಕ್ಕಿಂತ
ಈ ಹೃದಯಕ್ಕೆ ಬೇರೇನೂ ಇಲ್ಲ..

ಸಿಂಧು🍁
ದಿನಕ್ಕೊಂದು ಕವಿತೆ
_____________()___