...

10 views

ಸತ್ಯ ಸುಳ್ಳು
ಸತ್ಯ- ಸುಳ್ಳು

ಸತ್ಯವ ಹೇಳಲು ಧೈರ್ಯವು ಬೇಕು
ಸುಳ್ಳನು ಹೇಳಲು ಭಯಪಡಬೇಕು
ಸತ್ಯವು ಕೋಮಲ ಸುಮದಂತೆ
ಸುಳ್ಳಿನ ಮೊನೆಯು ಚುಚ್ಚುವುದಂತೆ

ಸುಳ್ಳಿನ ಮೇಲೆ‌ ಸುಳ್ಳು ಹೇಳುತ
ಸರಪಳಿ ನಮ್ಮನೇ ‌ಸುತ್ತುವುದು
ಸತ್ಯದ ಹಾದಿಯಲಿ ಎಂದಿಗೂ
ಜೇನ್ನೊಣಗಳು ಮುತ್ತುವುದು

ಸತ್ಯವು ಬಿಳಿಯ ಹಾಲಿನಂತೆ
ಕೆನೆಭರಿತ ಬಲು ಸ್ವಾದವು
ಸುಳ್ಳು ಹಳಸಿದ ಖಾದ್ಯದಂತೆ
ತಿಂದರೆ ಅಜೀರ್ಣ ಖಂಡಿತವು

ಸತ್ಯಕೆ ಶರಣಾಗಬೇಕು
ಸುಳ್ಳಿಗೆ ಕೊರಳ ನೀಡದಿರಿ
ಸತ್ಯದ ತೋರಣ ಸ್ವಾಗತಿಸಲು
ಸುಳ್ಳಿನ ಜೈಲಿಗೆ ಸೇರದಿರಿ

ಸತ್ಯದ ಪರದೆ ಎಂದಿಗೂ ಮುಚ್ಚದು
ಸುಳ್ಳಿನ ಕೋಣೆಯು ಕತ್ತಲೆಯು
ಸತ್ಯದ ಸಾಗರ ಎಂದಿಗೂ ಬತ್ತದು
ಸುಳ್ಳೆಂಬುದು ಆರಿದ ದೀಪವು

ಸತ್ಯವ ಜನರು ಬೇಗನೆ ಒಪ್ಪರು
ಸುಳ್ಳು ಎಲ್ಲೆಡೆ ಸೊಕ್ಕುವುದು
ಸತ್ಯದ ಮೇಲೆ‌ ನಂಬಿಕೆ ಇರಿಸಿರೆ
ಸುಳ್ಳಿಗೆ ಜಯವು ದಕ್ಕುವುದು...


- ಸಿಂಧು ಭಾರ್ಗವ ಬೆಂಗಳೂರು
© Writer Sindhu Bhargava