...

3 views

" ಪಯಣದಿ ಹಿತವಚನ....
"ಯಾವೊಬ್ಬ ವ್ಯಕ್ತಿಯು ತನ್ನನ್ನು ತಾನೇ ಪ್ರಿಯನೆಂದು ತಿಳಿಯುವುದು, ತನ್ನನ್ನು ತಾನು ಬಹು ಎಚ್ಚರಿಕೆಯಿಂದ ಗಮನಿಸುತ್ತಾ ರಕ್ಷಿಸಿಕೊಳ್ಳಬೇಕು.

ಜಾಣನಾದವನು ರಾತ್ರಿಯ ಮೂರು ಜಾವಗಳಲ್ಲಿ ಒಂದರಲ್ಲಿಯಾದರೂ ಜಾಗರೂಕನಾಗಿರಬೇಕು.
ಮೊದಲಿಗೆ ಒಬ್ಬನು ತನ್ನನ್ನು ತಾನು ಯೋಗ್ಯ

ರೀತಿಯಲ್ಲಿ ನಡೆಸಿಕೊಳ್ಳಬೇಕು ಅನಂತರ ಅವನು ಇತರರಿಗೆ ಹೇಳಬಹುದು.ಅಂಥ ಜಾಣನು ನಿಂದನೆಗೆ ಗುರಿಯಾಗುವುದಿಲ್ಲ.

ಒಬ್ಬನು ತಾನು ಇತರರಿಗೆ ಹೇಳುವುದನ್ನು ಮೊದಲು ತಾನೇ ಪಾಲಿಸಿರಬೇಕು.ಒಬ್ಬನು ಇತರರಿಗೆ ಕಲಿಸುವ ಮೊದಲು ತನ್ನನ್ನು ತಾನು

ಸಂಯಮಿಸಿಕೊಂಡಿರಬೇಕು.ತನ್ನನ್ನು ತಾನು ದುಡಿಸಿಕೊಳ್ಳುವುದು ಕಷ್ಟಕರ.
ಒಬ್ಬನು ತನ್ನನ್ನು ತಾನೇ ಕಾಪಾಡಿಕೊಳ್ಳಬಲ್ಲ. ಆತನೇ ಯಜಮಾನ,

ಬೇರೆಯವರು ಹೇಗೆ ತಾನೆ ಕಾಪಾಡುವ ಒಡೆಯರಾದಾರು? ಪೂರ್ಣವಾಗಿ ಸ್ವಸಂಯಮ ಪಡೆದಿರುವವನು, ಧುರ್ಲಭವಾದ, ಗಳಿಸಲು

ಕಷ್ಟವಾದ ತನ್ನ ಒಡೆತನದ ಹಿರಿಮೆ ಗಳಿಸಿರುತ್ತಾನೆ.
ಮೂರ್ಖನು ಮಾಡಿದ ಪಾಪವು, ಅವನಿಂದಲೇ ಆಗಿರುವಂತಹದ್ದು. ಅವನಿಂದಲೇ ಆರಂಭವಾಗಿರು ವಂತಹದ್ದು

ಮತ್ತು ಅವನಿಂದಲೇ ನಿರ್ಮಾಣವಾಗಿರು ವಂಶವನ್ನು ಅದು ಅವನನ್ನು ವಜ್ರವು ಕಠಿಣವಾದ ಮಣಿಯನ್ನು ಅರೆಯುವಂತೆ ಅರೆದು ಬಿಡುತ್ತದೆ.

ಮಾಲುವ ಬಳ್ಳಿಯು ಶಾಲ ಮರವನ್ನು ಸುತ್ತಿಕೊಂಡು, ಧುರ್ಬಲಗೊಳಿಸುವಂತೆ, ದುಶ್ಮೀಲನಾದವನಿಗೆ, ಅವನ ಕರ್ಮಗಳೇ ಮುಳುವಾಗುತ್ತವೆ.

ಆತನ ಶತ್ರು ಅವನ ನಾಶ ಬಯಸುವ ಹಾಗೆ,ತನ್ನನ್ನು ತಾನೇ ನಾಶಮಾಡಿಕೊಳ್ಳುತ್ತಾನೇ.

ಕೆಟ್ಟದ್ದನ್ನು ಮತ್ತು ತನಗೆ ಅಹಿತವಾದುದನ್ನು ಮಾಡಿಕೊಳ್ಳುವುದು ಸುಲಭ. ಆದರೆ ತನಗೆ ಹಿತವನ್ನುಂಟು ಮಾಡುವುದು ಮತ್ತು ಒಳ್ಳೆಯದನ್ನು ಮಾಡುವುದು ಪ್ರಯಾಸಕರ.

ಯಾರು ತನ್ನ ವಿಪರೀತವಾದ ವಿಚಾರ ಧೃಷ್ಟಿಯಿಂದಾಗಿ,ಶ್ರೇಷ್ಠ ಮತ್ತು ಧರ್ಮ ಜೀವನವನ್ನು ನಡೆಸುವವರ ಉಪದೇಶಗಳನ್ನೂ ಹಳಿಯುವರೋ,

ಅಂತಹ ಮೂರ್ಖರ,ಬಿದಿರಿನಂತೆ, ತನ್ನನ್ನೇ ನಾಶಮಾಡಲು ಹುಟ್ಟುವ ಬಿದಿರಿನ ಬೀಜದಂತೆ ತನ್ನನ್ನೇ ನಾಶಮಾಡುವ ಪಾಪವನ್ನು
ಮಾಡಿದಂತೆ.,✍
👍 shobha 👏🏻