...

15 views

ಶೀರ್ಷಿಕೆ:- ಹೆಣ್ಣೆಂದರೆ ಬೆಳಕು ಹೆಣ್ಣೆಂದರೆ ಬದುಕು*
ಹೆಣ್ಣೆಂದರೆ ಪದಗಳಲ್ಲಿ ಬಣ್ಣಿಸಲಾಗದವಳು
~~~~~~~~~~~~~~~~~~~~~~~~~~~~
*ಹೆಣ್ಣೆಂದರೆ ಮನೆಯ ಬೆಳಕು ಹೆಣ್ಣೆಂದರೆ ಬದುಕು* ಹೆಣ್ಣಿನ ಪಾತ್ರ ಬಹಳ ಮಹತ್ವವಾದದ್ದು. ಅವಳು ಹುಟ್ಟಿನಿಂದ ಸಾಯುವ ತನಕ ಅವಳ ಪಾತ್ರ ಬಹಳ ಭಿನ್ನ ಭಿನ್ನವಾದದ್ದು. ಅವಳಿಲ್ಲದೆ ಜೀವನ ಖಂಡಿತಾವಾಗಿಯೂ ಇಲ್ಲ. ಈ ಜಗದ ಸೃಷ್ಟಿಕರ್ತೇ ಹೆಣ್ಣಾಗಿರುವಾಗ ಅವಳಿಲ್ಲದೆ ಈ ಜಗವಿರಲು ಸಾಧ್ಯವೇ ಇಲ್ಲ. *ಹೆಣ್ಣೇ ಬಾಳಿನ ಬೆಳಕು* ಆಕೆ ಒಬ್ಬಳು ತಾಯಿಯಾಗಿ, ಮಗಳಾಗಿ, ಅತ್ತೆಯಾಗಿ, ಸೊಸೆಯಾಗಿ, ನಾದಿನಿ, ಅಕ್ಕ, ತಂಗಿ,ಅತ್ತಿಗೆಯಾಗಿ ವಿವಿಧ ಪಾತ್ರದಲ್ಲಿ ಮಿಂಚುವಳು.ಅವಳಿಗೆ ಸಮವಾದವರು ಇಲ್ಲಿ ಯಾರೂ ಇಲ್ಲ. ಪ್ರತಿಯೊಂದು ಮನೆಯೂ ಬೆಳಗಬೇಕೆಂದರೆ ಅಲ್ಲಿ ಒಬ್ಬಳು ಹೆಣ್ಣು ಬೇಕೇ ಬೇಕು. ಪ್ರತಿ ಗಂಡಿನ ಏಳಿಗೆಗೆ ಅವಳ ಪಾತ್ರ ಬಹಳ ಮಹತ್ವವಾದದ್ದು. ಪ್ರೀತಿ, ವಿಶ್ವಾಸದ ಪ್ರತೀಕವೇ ಅವಳು. ಹೆಣ್ಣೊಬ್ಬಳು ಮನಸ್ಸು ಮಾಡಿದರೆ ಇಡೀ ಬ್ರಹ್ಮಾಂಡವನ್ನೇ ಗೆದ್ದು ಬರುವಳು. ತನ್ನಲ್ಲಿರುವ ತಾಳ್ಮೆ ಎಂಬ ಸೂತ್ರದಿಂದ ಸಂಸಾರವನ್ನು ಚೆನ್ನಾಗಿ ನಿಭಾಯಿಸುವಳು. ತನ್ನ ತವರು ಮನೆಯಿಂದ ಗಂಡನ ಮನೆಗೆ ಬರುವಾಗ ಹಲವಾರು ಕನಸುಗಳ ಹೊತ್ತು ತಂದಿರುವಳು. ಆದರೆ ತನ್ನ ಬದುಕಲ್ಲಿ ಎಷ್ಟೇ ನೋವು, ಕಷ್ಟಗಳು ಎದುರಾದರೂ ಅದನ್ನು ಲೆಕ್ಕಿಸದೆ ಧೈರ್ಯದಿಂದ ಎದುರಿಸುವ ಛಲವಂತೆ ಅವಳು.
ಹೆಣ್ಣನ್ನು ಸತ್ಕರಿಸುವ ಮನಸ್ಸುಗಳಿಗೆ ದೇವತೆಯಾಗಿರುವಳು. ಹಾಗೆ ಹೆಣ್ಣು ಹುಟ್ಟಿದಾಗ ಹಿಂದಿನ ಕಾಲದಲ್ಲಿ ತುಂಬಾ ಮರುಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ ಈಗ ಅವಳನ್ನು ಕೊಂಡಾಡುವರು. ಹೆಣ್ಣು ಮಕ್ಕಳಿಗಾಗಿ ಸರಕಾರವು ಹಲವಾರು ಸೌಲಭ್ಯಗಳನ್ನು ಜಾರಿಗೊಳಿಸಿ ಹೆಣ್ಣಿನ ಜೀವನವನ್ನು ಪ್ರಜ್ವಲಿಸುವಂತೆ ಮಾಡಿದೆ. ಪ್ರತಿ ಹೆಣ್ಣಿನ ಕನಸು ನನಸಾಗಿದೆ. ಹಾಗೆ ಹೆಣ್ಣೆಂದರೆ ತಾತ್ಸಾರ ಮೂಡುವ ಪ್ರಮೇಯವೇ ಇಲ್ಲ. ಅವಳು ಗಂಡಿನ ಹಾಗೆ ಎಲ್ಲದರಲ್ಲೂ ಸಮಾನಳು. ಅವಳಿಗೂ ಆತ್ಮವಿಶ್ವಾಸವಿದೆ. ಪ್ರತಿ ಕ್ಷೇತ್ರದಲ್ಲೂ ಅವಳು ಮುಂಚೂಣಿಯಲ್ಲಿದ್ದಾಳೆ. ತಾನು ಹೆಣ್ಣೆಂಬ ಕೀಳರಿಮೆಯನ್ನು ಕಡೆಗಣಿಸಿ ಧೈರ್ಯದಿಂದ ಮುನ್ನಡೆಯುತ್ತಿದ್ದಾಳೆ. ಗೆಲುವೆಂಬ ಶಿಖರವನ್ನು ಹೆಮ್ಮೆಯಿಂದ ಏರುತ್ತಿದ್ದಾಳೆ. ಹೆಣ್ಣಿನ ಜನ್ಮವು ಸರ್ವ ಶ್ರೇಷ್ಠ.ಯಾಕೆಂದರೆ ಒಂದು ಜೀವಕ್ಕೆ ಜನ್ಮ ನೀಡುವ ಅವಳು ಅತೀ ಶ್ರೇಷ್ಠಳು. ತನ್ನೊಡಲಲ್ಲಿರುವ ಜೀವವನ್ನು ರಕ್ಷಿಸಿ, ಪೊರೆದು ಭೂಮಿಗೆ ಪರಿಚಯಿಸುವಷ್ಟರಲ್ಲಿ ಅವಳು ಒಂದು ಜನ್ಮದಿಂದ ಇನ್ನೊಂದು ಜನ್ಮವನ್ನು ತಾಳಿ ಬಂದಂತೆ ಅಂದರೆ *ಪುನರ್ಜನ್ಮ* ಪಡೆದಂತೆ. ತನ್ನ ಒಡಲಕೂಸಿಗಾಗಿ ತನ್ನ ಸುಖವನ್ನು ಬದಿಗಿಟ್ಟು ಎಲ್ಲರಿಗೂ ಸ್ಪೂರ್ತಿಯಾದ ಮಹಾತಾಯಿಯೇ ಹೆಣ್ಣು. ಅದಕ್ಕಾಗಿ ಹೆಣ್ಣು ಯಾವತ್ತೂ ಕೀಳಲ್ಲ. *ಅವಳು ಮನೆಯ ಬೆಳಕು ಹಾಗೆ ಬದುಕು* ಈ ಭೂಮಿಗೆ ಅವಳೊಬ್ಬಳು ವರದಾನ. ಅವಳಿಲ್ಲದೆ ಇಲ್ಲಿ ಎಲ್ಲವೂ ಶೂನ್ಯವಾಗಿರುವುದು. ಹಾಗೇ ಈ ಲೋಕವನ್ನು ಬಣ್ಣಿಸಲಸಾಧ್ಯ! ಹೆಣ್ಣೇ ಸೌಂದರ್ಯದ ಪ್ರತಿರೂಪ. ಅವಳಿಗೆ ಯಾರಾದರೂ ಕೇಡು ಬಗೆದರೆ ತಾಳುವಳು ಕಾಳಿ ರೂಪ. ಕವಿಗಳಿಗೆ ಅವಳೇ ಸ್ಪೂರ್ತಿ, ತಾಳ್ಮೆಯ ಸಹಕಾರ ಮೂರ್ತಿ‌ ಬದುಕಿಗೆ ಅವಳಿಂದಲೇ ದೊರೆಯುವುದು ಯಶಸ್ಸು,ಕೀರ್ತಿ.ಅವಳಿಗೆಂದೂ ಬರದಿರಲಿ ಅಪಕೀರ್ತಿ.ಹೆಣ್ಣೆಂದರೆ ಪದಗಳಲ್ಲಿ ಬಣ್ಣಿಸಲಾಗದವಳು.ಇಷ್ಟು ಮಾತುಗಳಲ್ಲಿ ಹೆಣ್ಣಿನ ಬಗ್ಗೆ ಪದಗಳ ಪೋಣಿಸುತ್ತಾ ನನ್ನ ಬರಹಕ್ಕೆ ಪೂರ್ಣ ಚುಕ್ಕಿಯನ್ನಿಡುವೆ.