ಹೊಸವರ್ಷ ಸಂಭ್ರಮಾಚರಣೆ
ಹೊಸವರ್ಷದ ಆಚರಣೆ
ಜನವರಿ ಒಂದು ಕ್ಯಾಲೆಂಡರ್ ವರ್ಷಾರಂಭದ ದಿನ. ಈ ದಿನ ಬಂದರೆ ತಲೆಯಲ್ಲಿ ನೂರಾರು ನೆನಪುಗಳ ದಿಬ್ಬಣ ಹೊರಡುತ್ತದೆ. ಆರು ಏಳು ವರ್ಷಗಳವರೆಗಿನದು ನೆನಪಿಲ್ಲ . ಮೂರನೇ ಕ್ಲಾಸಿಗೆ ಸೇರಿದ್ದು ಸೆಂಟ್ ಥಾಮಸ್ ಶಾಲೆಗೆ .ಆಗ ಎಂಟು ವರ್ಷ ಇರಬಹುದು ನನಗೆ .ಕ್ರಿಸ್ಮಸ್
ಮತ್ತು ಹೊಸ ವರ್ಷಗಳ ಪರಿಕಲ್ಪನೆ ಬಂದದ್ದೇ ಆಗ . ಹೇಳಿ ಕೇಳಿ ಮಲೆಯಾಳಿ ಕ್ರಿಶ್ಚಿಯನ್ನರ ಶಾಲೆ . ಡಿಸೆಂಬರ್ ಇಪ್ಪತ್ತೆರಡು ಇಪ್ಪತ್ಮೂರನೆಯ ತಾರೀಖಿಗೆ ಒಂದು ಸಮಾರಂಭ .ಹೆಚ್ಚಿನಂಶ ಈಗಿನ ಸ್ಕೂಲ್ ಡೇಗಳ ತರಹ. ವಿವಿಧ ಕ್ರೀಡಾ ಸ್ಪರ್ಧೆಗಳು ಬಹುಮಾನ ಗಳಿಸಿದವರಿಗೆ ವಿತರಣೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮುಗಿಸಿ ಜನವರಿ ಎರಡು ರವರೆಗೆ ರಜಾ ಘೋಷಣೆ .ಅದೇ ಖುಷಿಯ ವಿಷಯ. ಹೆಚ್ಚಿನ ಗುಲ್ಲು ಗಲಾಟೆ ಎಬ್ಬಿಸದೆ ಹೊಸ ವರ್ಷದ ಸ್ವಾಗತ ನಡೆದು ಹೋಗಿಬಿಡುತ್ತಿತ್ತು. ಆಗೆಲ್ಲಾ ಮನೆಯ ಬಳಿ ಗೆಳೆಯರು ಸಹ ಸೇರಿ ಆಚರಿಸಿದ ನೆನಪಿಲ್ಲ .
ನಂತರ ಪ್ರೌಢಶಾಲೆಯಲ್ಲಿ ಆ ದಿನ ರಜೆ ಇರುತ್ತಿರಲಿಲ್ಲ. ಆದರೆ ಆ ದಿನ ಸಮವಸ್ತ್ರ ಬಿಟ್ಟು ಬೇರೆ ಬಣ್ಣದ ಬಟ್ಟೆ ಹಾಕಲು ಅನುಮತಿ ಇತ್ತು .ಅದೊಂದು ತರಹ ಖುಷಿ. ಒಬ್ಬರಿಗೊಬ್ಬರು ಎದುರು ಸಿಕ್ಕವರಿಗೆ ಹ್ಯಾಪಿ ನ್ಯೂ ಇಯರ್ ಎಂದು ಹೇಳಿ ಕೈ ಕುಲುಕುವ ಪರಿಪಾಠ (ಬರಿ ಹುಡುಗಿಯರಿಗೆ ಮಾತ್ರಾಪ್ಪಾ)ಆಮೇಲಾಮೇಲೆ ತಿಳಿದದ್ದು ಕೆಲವು ಹುಡುಗರು ತಾವು ಲೈನ್ ಹೊಡೆಯುವ...