...

15 views

ಗಜಲ್
ನನ್ನೆಲ್ಲಾ ನೋವಗಳ ಮರೆತಿರುವೆ ನನ್ನವನ ಗುಂಗಲ್ಲಿ
ಕಷ್ಟಗಳ ಪ್ರೀತಿಸುವುದು ಕಲಿತಿರುವೆ ನನ್ನವನ ಗುಂಗಲ್ಲಿ

ಮೌನದ ಮಾತಿಂದಲೂ ಮನದ ಅಳಲ ಅರಿಯುವನು
ಕತ್ತಲಲ್ಲೂ ಬೆಳಕನ್ನು ನೋಡುತಿರುವೆ ನನ್ನವನ ಗುಂಗಲ್ಲಿ

ಅತಿ ಸುಲಲಿತ ವಲಯದ ವ್ಯಸನಿಯಾಗಿದ್ದ ಕಾಲ ಒಂದಿತ್ತು
ಸುಲಭವಲ್ಲದ ಕಾರ್ಯ ಮಾಡುತಿರುವೆ ನನ್ನವನ ಗುಂಗಲ್ಲಿ

ಹೊಂದಿಕೆ ಎಂಬುದು ವಿರಳಾತಿ ವಿರಳ ಎಂದೇ ಅನಿಸಿತ್ತು
ಬದಲಾಗುವ ಪ್ರಕೃತಿಯಲಿ ಬೆರೆತಿರುವೆ ನನ್ನವನ ಗುಂಗಲ್ಲಿ

ಮಲ್ಲಿಗೆ ಸುಮವಿದು ಬಾಧಿಸುವುದ ಅರಿಯದೆ ಅರಳಿತ್ತು
ವಿಷ ಮುಳ್ಳುಗಳ ಮೆಟ್ಟಿ ಬರುತಿರುವೆ ನನ್ನವನ ಗುಂಗಲ್ಲಿ.