...

5 views

ಭಾವಚಿತ್ರದ ಭಾವ
ನಗೆಯಲ್ಲದ ನಗೆಯಲ್ಲಿ
ಮುಗ್ಧತೆಯ ಬೆಳಕಲ್ಲಿ
ಮಿಂದು ಬಂದಿಹೆವು
ತಾರೆಗಳ ಹೊಳಪ ಪಡೆದು॥
ಬಡತನವು ನಮಗಿಲ್ಲ
ಸಿರಿತನದ ಹಂಗಿಲ್ಲ
ಮಧ್ಯಮದ ಹಾದಿಯಲಿ
ನಡೆದು ಸಾಗಿ॥
ಜಗಳ ಮುನಿಸುಗಳೆಡೆಯಲ್ಲಿ
ನಗಿಸಬೇಕೆನುವ ಹಟದಲಿ
ಗೆದ್ದುಬಂದವರು ನಾವು
ನಗೆಯ ತರಿಸಿಹೆವು ನಾವು॥
ದೇಹಸ್ವಾಸ್ಥ್ಯವು ಕೆಡಲು
ಹಣದ ಮೂಲವೇ ಕೈಗೊಡಲು
ನೋವಿನೊಂದಿಗೆ ಬೆಳೆದು
ಒಂಟಿಯಾಗಿಯೆ ಕಂಡ ನೆನಪು॥
ಎದೆಯುದ್ದ ಬೆಳೆದು
ಒಡವೆ ರಕ್ಷಣೆಗಾಗಿ
ಕೊಟ್ಟ ತೃಪ್ತಿ ನಿಮ್ಮದು
ಋಣ ಭಾರ ನನ್ನದು॥
ಕಾಡುತಿದೆ ಮನವ
ಕಳೆದ ಜೀವನ ಯಾತ್ರೆ
ಇರುವ ಒಂದು ಜೀವಕೆ
ಸಾಂತ್ವನವ ಹೇಳಲಾಗದ ಚಿಂತೆ॥




Related Stories