ಗಜಲ್
ನನ್ನಿರುವನ್ನೇ ಮರೆವವರ ಒಲವಿಗೆ ವಿನಂತಿಸುವುದು ತಪ್ಪಲ್ಲವೆ
ನನ್ನೊಲುಮೆ ಬೇಕಿಲ್ಲದವರ ಪ್ರೀತಿಗೆ ಕಾಡಿಸುವುದು ತಪ್ಪಲ್ಲವೆ
ಜೊತೆ ಜೊತೆಗೆ ಹಗಲಿರುಳು ಕಾಮನೆಗಳ ವಿನಿಮಯಿಸಲಾಸೆ
ನನ್ನರಿಯಲು ಒಲ್ಲದವರ ಸಮಯಕೆ ಯಾಚಿಸುವುದು ತಪ್ಪಲ್ಲವೆ
ಜನ್ಮಜನ್ಮಾಂತರಕು ಹೆಜ್ಜೆಯೊಂದಿಗೆ ಹೆಜ್ಜೆ ಜೋಡಿಸುವಾಸೆ
ನನ್ನನಿಸಿಕೆಗೆ ಗಮನವಿಲ್ಲದವರ ಆಸ್ತೆಗೆ ಆಶಿಸುವುದು ತಪ್ಪಲ್ಲವೆ
ಜೀವಕೆ ಜೀವ ಸೇರಿಸಿ ಮಧುರ ಬಂಧನದಲ್ಲಿ ಬಂಧಿಯಾಗುವಾಸೆ
ನನ್ನುಸಿರಿಗೆ ಬೆಲೆಯಿಲ್ಲದವರ ಆದರಕೆ ಧ್ಯಾನಿಸುವುದು ತಪ್ಪಲ್ಲವೆ
ಸುಮದ ಸುವಾಸನೆಯ ಭಾವಗಳ ಅಂತಃಕರಣ ಸೇರಿಸುವಾಸೆ
ನನ್ನಂತರಂಗ ಕಾಣದವರ ನಲ್ಮೆಗೆ ಹಂಬಲಿಸುವುದು ತಪ್ಪಲ್ಲವೆ
© ಸುಕನಸು