...

7 views

ಆಸೆ - 1
ಈ ಮನುಜನ ವಯಸ್ಸು, ಮುಗಿಯುವ ವರೆಗೂ
ಆಸೆಯ ಮನಸ್ಸು, ಕರಗುವ ವರೆಗೂ
ನನಸಾಗದ ಕನಸು, ಅರಿಯುವ ವರೆಗೂ
ಆಸೆಯ ಆಟವು ನಿಲ್ಲದು ನೋಡು........................

ಆಸೆಯ ಹಿಂದೆಯೇ ಉಳಿದು
ಆಸೆಯೇ ಮುಂದೆ ಇರಲು
ಬೇರೇನೂ ಕಾಣದು ನಮಗೆ
ಗುರಿಯ ದಾರಿಯ ಮರೆತು...................................

ಆಸೆಯ ಪಾಶಕ್ಕೆ
ಸಿಕ್ಕವರೆಷ್ಟೋ ಸಿಗದವರೆಷ್ಟೋ
ಸಿಕ್ಕರೂ ಸಿಗದಿದ್ದರೂ
ಅದು ಸೆಳೆಯುವುದ ಬಿಡದು
ನಾವು ಬಲಿಯಾಗುವುದು ತಪ್ಪದು.........................

ಆಸೆಯ ಬಿಟ್ಟರೂ ಇನ್ನ, ಆಸೆಯೇ ಬಿಡದು ಎನ್ನ
ನಿಂತಲ್ಲಿ ಕುಂತಲ್ಲಿ, ಕಂಡಿದ್ದು ಕೇಳಿದ್ದು
ಎಲ್ಲವೂ ಬೇಕೆನಿಸೋ ಬಯಕೆಯ ತಂದಿಟ್ಟು
ಹೊಗೆಂದರೆ ಹೋಗದ್ದು, ಸಿಕ್ಕರೆ ಸಾಕಾಗದ್ದು...........

ಹುಚ್ಚು ಕುದುರೆಯ ಮನಸು
ಇಂದೇ ನಾಳೆಯ ನೋಡುವ ಆಸೆ
ಹಗಲಲಿ ಚಂದ್ರನ ಕಾಣುವ ಆಸೆ
ಆದರೆ ಕೊನೆಯಲಿ ಆಗುವುದೇ ನಿರಾಸೆ.................
_______________________________________

ಈಗೊಂದು ಆಸೆಯು ಚಿಗುರಿ
ಆಕಾಂಕ್ಷೆಯಾಗಿ ತಿರುಗಿ
ಅತಿಯಾಸೆಯಾಗಿ ಬೆಳೆದು
ಈಗ ಗಿಡವಾಗಿ ಬಗ್ಗದ್ದು
ಹೆಮ್ಮರವಾಗಿ ಬಗ್ಗೀತೆ!!?.......................................

ಆಸೆಗಳ ಆಲದಮರವು
ಬೇರೂರಿ ನಿಂತಿರಲು
ಉರುಳದೆ ಅಳಿಯದೇ
ಉಳಿದು ಬೆಳೆದಿದೆ ನನ್ನಲ್ಲೇ....................................

ಆಸೆಯ ಆಳವು ಅರಿತವರಿಲ್ಲ
ಅಳತೆಯ ಅಳೆದು ಹೊರ ಬಂದವರಿಲ್ಲ
ಕೆಲವರು ಆಳದೀ ಈಜುವರಯ್ಯ
ಹಲವರು ಒಳಗೇ ಮುಳುಗುವರಯ್ಯ....................

ಆಸೆಯ ಎದುರು ಯಾರೂ ನಿಲ್ಲರೂ
ಹೆಮ್ಮೆಯಿಂದ ನೀನೇ ನಿಂತರೂ
« ಒಮ್ಮೆ ಆಸೆಯು ಒಳಹೊಕ್ಕಲು
ಮನದಾಳದೇ ಆಸರೆಗೊಂಡು
ನಿನ್ನನ್ನಾಳುವ ಅರಸನಾಗಿ
ನೀನದರ ಕೈಸೆರೆಯಾಗಿ »
ಅದು ಆಡಿಸಿದಂತೆ ಆಡುವ ಆಳು
ನಿನಗರಿಯದೆ ಆಗ ನೀನಾಗುವೆ.............................

ಆಸೆಯ ಭಾಷೆಯು ಮೌನವೇ ಆದರೂ
ಅದರ ಪ್ರಭಾವವು ಆಗಧವಾದುದು
ಭಾವ ಕಳೆದು ಸ್ವಭಾವ ಬದಲಿ
ಈಗ ನೀ ನಿನ್ನನು ಮರೆತು
ನೀನಲ್ಲದ ನೀನು, ನೀನಾಗುವೆ...............................
© chethan_kumar