...

3 views

ಹೂವುಗಳು
#BloomingFables
ಬಣ್ಣಬಣ್ಣದಲಿ ಜಗದಗಲ
ಅರಳಿ ನಗುತಿರುವ
ಪ್ರಕೃತಿ ಮಾತೆಯ ಒಡಲ
ಮುಗ್ಧ ಕೂಸು ನೀನು॥

ರವಿಯ ಉದಯದಿ
ಪುಳಕ ತಾಳುತ
ಸ್ವಾಗತವ ಗೈಯ್ಯುತ್ತ
ನಿಂತ ಚೆಲುವೆಯೇ..॥

ಅಂದಗಾತಿಯ ಚೆಲುವ
ಸೊಗಸುಗಾರನು ಕಂಡು
ಮಧುವ ಬಯಸುತ ಬಂದು
ಸಿಹಿಮುತ್ತನೊಂದನು ಇತ್ತ॥

ಮಧುಕರನ ಸಾಂಗತ್ಯ
ಕಳೆದಿಹ ಚೆಲುವೆ
ದೇವನಡಿದಾವರೆಯ
ಸೇರಿ ನಲಿದಾಡಿತು ॥

ನಲುಗಿ ಹೋಗುವೆನೆಂಬ
ತಲ್ಲಣದ ಸಮಯದಲಿ
ನಾರಿಯರ ಮುಡಿಗೇರಿ ನಲಿವ
ಭಾಗ್ಯವು ದೊರೆಯಿತು॥

ಸ್ನೇಹ ಪ್ರೀತಿಗೆ ಬೇಕು
ಚಿತ್ರ ತೆಗೆಯಲು ಬೇಕು
ನೋವಿಗೆ ಸಾಂತ್ವನಕ್ಕೆ
ಹೂವೇ ಬೇಕು ನಮಗೆಲ್ಲ॥

ಹುಟ್ಟು ಸಾವಿನ ಕ್ರಮಕೆ
ಬಾಗಿಲಿನ ತೋರಣಕೆ
ವಿವಾಹಕ್ಕೆ ಉತ್ಸವಕ್ಕೆ
ಬೇಕು ಹೂವಿನಾ ತೇರು॥

ದಿನದ ಅಂತ್ಯದ ವರೆಗೆ
ಬದುಕಿನ ಕ್ಷಣಗಳನ್ನು
ಬಂದ ಹಾಗೆಯೇ ಸ್ವೀಕರಿಸಿ
ಹೂವಂತೆ ಬಾಳಬೇಕು॥




© All Rights Reserved

Related Stories