...

7 views

ಕಾಲ
ಹರುಷ ತರುವ ವರ್ಷ ಕಾಲವು
ಭೂವನಿತೆಗೆ ಸ್ಪರ್ಶ ನೀಡಲು
ಹಸಿರು ಪತ್ತಲ ಉಟ್ಟ ವಧುವಿನಂದದಿ
ಮೆರೆವ ಭೂರಮೆ ಅಂದವು

ನೆಲಕೆ ಬಂದಿತು ಹಸಿರು ಹೊದಿಕೆ
ಗಿಡವು ತಳೆದಿದೆ ಹೂವ ತೇರನು
ಜೀವ ಕುಲಕದು ಜೀವ ನೀಡಿತು
ವರ್ಷ ಕಾಲದ ಹರ್ಷವು

ಕಾಂಬ ಕಣ್ಣಿಗೆ ಹಬ್ಬವಾಗಿರೆ
ಮನಕೆ ಸಂತಸ ನೀಡುತಿರೆ
ಸ್ವಸ್ಥ ಜೀವನ ನಮ್ಮದಾಗಿರೆ
ನೆಮ್ಮದಿಯ ತವರು ನಮ್ಮದು






Related Stories