...

7 views

ಮನೆ
ಜೀವನದ ಯಾನವು
ಸಾಗುವ ದಾರಿಯಲಿ
ಮಜಲುಗಳನು ಏರಿ
ಬಂದುದನು ಎದುರಿಸಿ
ಮುನ್ನಡೆದವರು ನಾವು
ಕಷ್ಟಸುಖಗಳಲಿ
ಸಮಭಾಗಿಯಾಗಿ
ತಾಯಿ ಪಟ್ಟವ ಪಡೆದು
ಸಂತಸದಿ ನಡೆದೆ॥
ಮನಸಲಿ ಯೋಚಿಸಿ
ಕನಸು ಕಾಣಲಾಗದೆ
ಕೈಬಿಟ್ಟ ಕೂಸಿದು
ಕೈಗೂಡಿದ ಗುಡಿಯಿದು॥
ಇಂದು ನನ್ನಯ ಮನೆಯು
ನೆಮ್ಮದಿಯ ತಾಣವಹುದು
ಬದುಕಿನ ದೇವರೊಂದಿಗೆ
ಕನಸಿನ ಹೂಗಳೊಂದಿಗೆ
ಸಂತಸದ ಬದುಕ ಬೇಡುವೆನು-॥



Related Stories