...

7 views

ಸೂರ್ಯಕಾಂತಿ ಹೂವು
ಬಾನರವಿಯನು
ಹೋಲುತಿಹುದು
ನೆಲದ ಮೇಲಿನ
ಪುಷ್ಪವು॥
ರವಿಯ ಬರವಿಗೆ
ತಲೆಯನೆತ್ತಿ
ನಗೆಯ ಸೂಸುತ
ನಿಂತಿದೆ॥
ಬಾನ ಬಯಲಲಿ
ಭಾನು ಚಲನೆಯ
ಭಾವ ಬಂಧನ
ಹೂವಿಗೆ॥
ಸಖನ ಆಗಮನಕೆ
ನಗೆಯ ಚೆಲ್ಲುತ
ನಿಂತ ಸಖಿಯ
ತೆರದಲಿ॥
ಇರಲಿ ಗೆಳೆತನವು
ನೇಸರನ ತೆರದಲಿ
ಬಾಳಿನುದ್ದಕು
ಮುನಿಸ ಮರೆತು॥
ಗೆಳೆತನದ ಸವಿಯು
ಸವಿದಷ್ಟು ಸಿಹಿಯು
ಮರೆತು ಬಾಳಿದರೆ
ಬಾಳು ಕಹಿಯು॥