...

20 views

ಯಾರೋ ನೀ ಅಭಿಮಾನಿ
ಯಾರೋ ನೀ ಅಭಿಮಾನಿ
ತುಟಿ ಅಂಚಿನಲಿ ನಗುವ ತಂದವನು

ನಗುವ ತಂದು.... ಹೃದಯದಲ್ಲಿ ಮನೆ ಮಾಡಿದವನು...
ಮನೆ ಮಾಡಿ ಮನವ ಸೇರಿದವನು

ಮನವ ಸೇರಿ....ಭಾವನೆಯ ವೀಣೆ ನುಡಿಸಿದವನು....
ವೀಣೆ ನುಡಿಸಿ ಹೃದಯ ಸೇರಿದವನು

ಹೃದಯಾ ಸೇರಿ..... ಉಸಿರಲ್ಲಿ ಉಸಿರಾಗಿ...ನನ್ನೊಳಗೆ ನೆಲೆಸಿಹನು...
ನನ್ನೊಳಗೆ ನೆಲೆಸಿ ನಗುವಿನ ಹೂ ಅರಳಿಸಿದವನು...

ರಾಧಾ ಹಾಸನ
© All Rights Reserved