...

8 views

ಗಜಲ್
ಜಗವನೆ ಮೆಚ್ಚಿಸುವುದು ಮಾತು
ಪ್ರೀತಿಯ ಹೆಚ್ಚಿಸುವುದು ಮಾತು

ಅಕ್ಕರೆ ಸಹ ಎಷ್ಟು ಸಹಿಸುವುದು
ಒಲವ ಮುಚ್ಚಿಸುವುದು ಮಾತು

ಗಾಳಿಮಾತಿಗೆ ಮಹತ್ವ ಅಪಾರ
ಬೆಂಕಿಯ ಹಚ್ಚಿಸುವುದು ಮಾತು

ಹೃದಯ ಅರಸುವುದು ಒಲವು
ಮನವನೆ ಬೆಚ್ಚಿಸುವುದು ಮಾತು

ಬಿಸಿಲ ಕಾವಿಗೆ ಸುಮ ಬಾಡುವುದು
ಗೌರವವ ಬಿಚ್ಚಿಸುವುದು ಮಾತು
© ಸುಕನಸು