...

26 views

ನನ್ನಾಸೆ
ಮುಂಜಾನೆಯ ಚಿಗುರೆಲೆಗಳಲಿ ಮೌನದಿ ಕುಳಿತಿರುವ ಇಬ್ಬನಿ ನಾನಾಗುವಾಸೆ
ನೇಸರನ ಹೊಂಬಣ್ಣವ ಎರವಲು ಪಡೆದು ಕಂಗೊಳಿಸುವ ಅಂಬರ ನಾನಾಗುವಾಸೆ
ಮಲೆನಾಡ ಸೊಬಗಿನ ಪ್ರಕೃತಿಯಲ್ಲಿ ಬೀಳೋ ವರ್ಷಧಾರೆ ನಾನಾಗುವಾಸೆ
ಮುಗಿಲಲಿ ಸ್ವಚ್ಛಂದವಾಗಿ ವಿಹರಿಸುವ
ಬಿಳಿ ಮೋಡ ನಾನಾಗುವಾಸೆ
ಜಗದೊಡೆಯ ಶ್ರೀ ಕೃಷ್ಣನ ಮುಡಿಯಲಿ ಅಲಂಕಾರಗೊಂಡಿರುವ ಗರಿಯು ನಾನಾಗುವಾಸೆ.