...

11 views

ಪ್ರತಿಬಿಂಬ
ದರ್ಪಣದ ಮುಂದೆ
ನಿಂತು ನೋಡಲು
ಕಂಡ ಪ್ರತಿಬಿಂಬ
ಅರುಹಿತು ನಿಜವ॥
ಅಂದ ಚೆಂದದ
ಗೊಂಬೆ ನೀನಲ್ಲ
ಥಳುಕು ಬಳುಕಿನ
ಬದುಕು ನಿನ್ನದಲ್ಲ॥
ಮಿಗಿಲಾದ ಶಕ್ತಿ
ನಿನ್ನೊಳಿದೆ
ಸಾಧನೆಗೆ ಸಾಮರ್ಥ್ಯ
ನಿನ್ನೊಳಿದೆ॥
ದರ್ಪಣದ ಬಿಂಬವದು
ತಿಳಿಸಿತು ಈ ಸತ್ಯವ
ಮನವು ಸಂತಸವ
ತಾನೇ ಪಡೆಯಿತು॥
ಮನದ ಅಂಜಿಕೆ ನೀಗಿ
ಧೈರ್ಯದಿಂದಲಿ
ಕಾರ್ಯ ಸಾಧನೆಗೆ
ಹೊರಡಬೇಕು॥
ಇದುವೆ ಬದುಕಿಗೆ
ಹುರುಪು ನೀಡಿತು
ನನ್ನತನವನು
ಬೆಳೆಸಿತು॥