...

10 views

ಕಲಿಕೆ.... ಎಷ್ಟು ಮುಖ್ಯ?
ಮಕ್ಕಳು ಡಿಫರೆಂಟ್ ಆಗಿ ಯಾವಾಗ ಯೋಚನೆ ಮಾಡಿ ನಿರ್ಧಾರ ತಗೋತಾರೋ,ಆಗಲೇ ಅವರ ಪ್ರೌಡಿಮೆಯ ಆಳ ಅರಿವಾಗೋದು...
ಮಕ್ಕಳು, ನಾವು ಬೆಳೆಸಿದಂತೆ ಬೆಳೆಯುತ್ತಾರೆ ಇದಂತೂ ಸತ್ಯ.. ನಮ್ಮನ್ನು ಅನುಕರಣೆ ಮಾಡಿಯೇ ಆವರು ಬೆಳೆಯೋದು..
ಮಕ್ಕಳಿಗೆ, ನಮ್ಮ ಪರಿಸ್ಥಿತಿ ಅರ್ಥ ಆಗುವಂತೆ ಬೆಳೆಸಬೇಕು.. ಹಾಗೇ ಹಿತಮಿತವಾದ ಜೀವನ ನಡೆಸುವ ಕಲೆಯನ್ನು ಕಲಿಸಿ ಕೊಡಬೇಕು.. ಆಗ ಮಕ್ಕಳು ಕೂಡ ಸರಿಯಾದ ನಿರ್ಧಾರ ತೆಗೆದುಕೊಂಡು ಬದುಕುತ್ತವೆ..

ಮಗಳು ಖುಷಿಯಿಂದ ಅಮ್ಮ, ನೀನು ತುಂಬಾ ಗ್ರೇಟ್ ಎಂದು ಹೇಳುವಾಗ ಕಣ್ಣು ತೇವವಾಗಿತ್ತು ನನಗೆ.. ಹೆಮ್ಮೆಯಿಂದ..
ಆಗಿದ್ದಿಷ್ಟೇ...ಅವಳ ರೂಮೇಟ್ ಹೆಣ್ಣು ಮಕ್ಕಳು ಅವರವರ ಅಮ್ಮಂದಿರ ಬಗ್ಗೆ ಹೇಳುವಾಗ, ಇಷ್ಟು ಗೋಲ್ಡ್ ಮಾಡಿಸಿ ಕೊಂಡ್ರು...ದೊಡ್ಡ ಅಮೌಂಟ್ ನ ಸಿಲ್ಕ್ ಸೀರೆ ತೆಗೆದುಕೊಂಡರು ಅಂತ ಹೇಳ್ತಾ ಇದ್ರಂತೆ.ಆದರೆ,ಆ ಮಕ್ಕಳಿಗೆ ನೋಟ್ಸ್ ಖರೀದಿ ಮಾಡಲು ಅರ್ಜೆಂಟ್ ಸಾವಿರ ರೂಪಾಯಿ ಬೇಕಾದಾಗ ಮನೆಯಿಂದ ಹಣ ಬರಲು ನಾಲ್ಕೈದು ದಿನ ಲೇಟ್ ಆಗಿ, ಶಿಕ್ಷಕರ ಮುಂದೆ ತಲೆತಗ್ಗಿಸಿ ನಿಂತ ಆ ಮಕ್ಕಳ ಪಾಡು ನೆನೆದು ನನ್ನ ಮಗಳಿಗೆ ಅನಿಸಿದ್ದು ಆ ಕ್ಷಣ...ಹೌದು,ನನ್ನ ಅಪ್ಪ ಅಮ್ಮ ,ಗ್ರೇಟ್ ಫುಲ್... ಯಾಕೆಂದರೆ ಅನವಶ್ಯಕ ಖರ್ಚು ಮಾಡದೇ ಇರುವುದರಲ್ಲೇ ಬದುಕುತ್ತಾರೆ...ಅದರಿಂದ ನಾನಿವತ್ತು ಚೆನ್ನಾಗಿ ಇದೀನಿ ಅಂತ.ಅವಳು ಹೆಮ್ಮೆಯಿಂದ ಹೇಳುವಾಗ ನಿಜಕ್ಕೂ ಕಲಿಸಿಕೊಟ್ಟ ಬದುಕಿನ ರೀತಿಗೆ ಒಂದು ಅರ್ಥ ಬಂದಂತಿತ್ತು...ಯಾಕೆಂದರೆ ಇವತ್ತಿನ ಜೀವನ ತುಂಬಾ ಶೋಕಿಮಯವಾಗಿದೆ..ಅದರಲ್ಲೂ ಹೆಣ್ಣು ಮಕ್ಕಳು ಪ್ಯಾಷನ್ ಎಂಬ ಕರಾಳ ಕಪಿ ಮುಷ್ಟಿಯಲ್ಲಿ ಬಂಧಿತರಾಗಿದಾರೆ...ಇಂತಹ ವಾತಾವರಣದಲ್ಲಿ ಮಗಳನ್ನು ತುಂಬಾ ಸರಳ ವ್ಯಕ್ತಿತ್ವದವಳನ್ನಾಗಿ ರೂಪಿಸುವ ಕಾಯಕ ನನಗೆ ಒಂದು ರೀತಿಯಲ್ಲಿ ಪಣವಾಗಿತ್ತು..ಯಶಸ್ವಿಯಾಗಿದ್ದೇನೆ ಕೂಡ.. ಅನವಶ್ಯಕ ಖರ್ಚು ಮಾಡದೇ,ಹಿತಮಿತವಾಗಿ ಬದುಕುವ ಕಲೆಯನ್ನು ರೂಢಿಸಿಕೊಂಡಿದಾಳೆ..ಪ್ಯಾಷನ್ ಎಂಬ ಮೂರು ಅಕ್ಷರಕ್ಕೆ ಸ್ಥಳವಿಲ್ಲ ಅವಳ ಬಳಿಯಲ್ಲಿ.. ಹಾಗಂತ, ಅವಳಿಗೆ ಆಸೆ ಇಲ್ಲ ಅಂತಲ್ಲ,ಅಥವಾ ಟೇಸ್ಟ್ ಇಲ್ಲ ಅಂತಲ್ಲ..ಕಲಿಯುವ ಹಂತದಲ್ಲಿ ಕಲಿಕೆಗೆ ಮಾತ್ರ ಮನಸ್ಸು ಕೊಡಬೇಕು ಎನ್ನುವುದು ಅವಳ ನಿಲುವು....ನಂತರ ನನ್ನ ಕಾಲ ಮೇಲೆ ನಾನು ನಿಂತುಕೊಂಡ ಮೇಲೆ, ಯಾವುದೇ ಬ್ರಾಂಡ್ ಇರಲಿ...ದುಡ್ಡಿಗೆ ಯೋಚನೆ ಮಾಡುವ ತರ ಇರಬಾರದು ಆ ಕ್ಷಣ... ಹಾಗೆ ಬೆಳೆಯಬೇಕು ತಾನು ಎಂಬ ದೊಡ್ಡ ಕನಸು ಅವಳ ಕಂಗಳಲ್ಲಿ..

ಮೊದಲು ಕಲಿಕೆ,ಪ್ಯಾಷನ್ ಮಾಯೆಯೊಳಗೆ ಸಿಲುಕಿದರು ಎಂದರೆ, ಕಲಿಯುವ ಆಸಕ್ತಿ ಕೂಡ ಇರದು ಮಕ್ಕಳಿಗೆ..ಅವರ ಕಾಲ ಮೇಲೆ ನಿಂತುಕೊಂಡ ಮೇಲೆ ಅವರದೇ ಬದುಕು.. ಆದರೆ, ಕಲಿಯುವ ಹಂತದಲ್ಲಿ ಸರಳ,ವ್ಯಕ್ತಿತ್ವ ರೂಢಿಸಿಕೊಂಡರೆ ಮಾತ್ರ ಏನನ್ನಾದರೂ ಸಾಧಿಸಬಹುದು ಜೀವನದಲ್ಲಿ..
ಹೌದು,ಇಲ್ಲಿ ತಂದೆತಾಯಿಯ ಪಾತ್ರ ಕೂಡ ಬಹಳವಿದೆ.ಮಕ್ಕಳಿಗೆ ಸ್ನೇಹಿತರಾಗಿ ಮಾರ್ಗದರ್ಶನ ನೀಡಬೇಕು. ಯಾವುದು ತಪ್ಪು, ಯಾವುದು ಸರಿ ಅಂತ..ಆಗ ಮಕ್ಕಳು, ಹೆತ್ತವರು ತಲೆ ಎತ್ತಿ ನಡೆಯುವಂತೆ ಬಾಳುತ್ತಾರೆ..ಜೀವನದಲ್ಲಿ ಎಡವಿ ಬೀಳದೆಯೇ...