...

3 views

ಹಣ...ಹಣ...ಹೆಣವೂ ಬಾಯಿ ಬಿಡುವುದಂತೆ😁
ಹಣ...ತಾಯ್ಮಕ್ಕಳನ್ನೇ ಅಗಲಿಸುವುದಂತೆ...😊

ಪರಿಚಯದವರು ಒಬ್ಬರು ಅರ್ಜೆಂಟ್ ಹಣ ಬೇಕಿತ್ತು. ಆಮೇಲೆ ಮರಳಿ ನೀಡುವೆ ಎಂದರು..ಕ್ಷಮಿಸಿ.. ನನ್ನ ಬಳಿ ಹಣವಿಲ್ಲ ಎಂದಾಗ ಅಕ್ಷರಶಃ ಅಪರಿಚಿತ ಬಂಧದಂತೆ ಆಯಿತು ಆ ಬಂಧ..😂ಮೊದಲಿಗೆ ನಮ್ಮ ಮಲೆನಾಡಿನ ಹೆಣ್ಣು ಮಕ್ಕಳು ಆರ್ಥಿಕವಾಗಿ ಗಂಡುಮಕ್ಕಳನ್ನೇ ಆಶ್ರಯಿಸೋದು😁ಮತ್ತೆ ಶೋಷಣೆ ಎಂಬ ಪದ ಪ್ರಯೋಗ ಬೇಡ😂..ಮೊದಲಿನಿಂದಲೂ ರೂಢಿ..
ಬಳೆ ತೆಗೆದುಕೊಳ್ಳುವುದಕ್ಕೂ ಗಂಡನ ಜೋಬಿನಿಂದಲೇ ಹೊರ ಬರಬೇಕು ಹಣ..ಅಕಾಸ್ಮಾತ್ ಆಗಿ ನಮ್ಮ ಬಳಿಯೇ ಚೂರು ಪಾರು ಇದೆ ಅಂತಾದರೂ ಮೆನೇಜರ್ ಗೆ ಲೆಕ್ಕ ಇದ್ದೇ ಇರುತ್ತೆ😂ಚೂರು ಮೈನೆಸ್ ಆಯಿತು ಅಂದರೂ ಅಲ್ಲಿ ಪರಿಶೀಲನೆಗೆ ಒಳಗಾಗುತ್ತದೆ😂.
ಅಂತಹುದರಲ್ಲಿ ಹಣ ಬೇಕಿತ್ತು ಅಂದರೆ ಎಲ್ಲಿಂದ ತಂದು ಕೊಡೋದು?😁
ಎಲ್ಲಾ ಒತ್ತಟ್ಟಿಗಿರಲಿ..😁ಪುರಾಣ ಬೇಡ😁
ನನ್ನ ಅನುಭವದಿಂದ ಹೇಳುವುದಾದರೆ ,ಸಂಬಂಧಗಳಲ್ಲಿ ವ್ಯವಹಾರ ಬರಲೇಬಾರದು..ಕಾರಣಾಂತರಗಳಿಂದ,ಇರುವುದನ್ನೆಲ್ಲ ಬಿಟ್ಟು,ಕೇವಲ 500 ರೂ ಬಸ್ ಚಾರ್ಜ್ ಹಿಡಿದು ಈ ಮಹಾನಗರ ಬೆಂಗಳೂರಿನಲ್ಲಿ ಒಂದು ಹಂತದ ಸ್ವಾವಲಂಬನೆಯ ಬದುಕು ಕಟ್ಟಿಕೊಂಡ ನಮಗೆ ಕಷ್ಟ, ನೋವು ,ನಷ್ಟ ಎಲ್ಲವೂ ಈಗ ಸುಲಲಿತ.....ನಾವು ನಂಬಿದ್ದು ಒಂದು ಆ ದೈವವನ್ನು, ಮತ್ತು ನಮ್ಮ ಪರಿಶ್ರಮವನ್ನು....
ನಮ್ಮ ಪ್ರಾಮಾಣಿಕ ನಡೆಯನ್ನು ನೋಡಿ ಸಹಾಯ ಹಸ್ತ ಚಾಚಲು ಮುಂದೆ ಬಂದವರೂ ಇದಾರೆ ಇಲ್ಲ ಅಂತಲ್ಲ..ಆದರೆ ನಾವು ದುರುಪಯೋಗ ಪಡಿಸಿಕೊಂಡಿಲ್ಲ ....ತುಂಬಾ ಆಪ್ತ ಜೀವಗಳಿವೆ...ಕಷ್ಟ ಎಂದರೆ ಸಾಕು ..ಹೆಗಲಾಗಿ ನಿಲ್ಲುವ ಸಹೋದರತೆಯ ಬಂಧವಿದೆ...ಆದರೂ ಅವರ ಗೌರವದ ಪ್ರೀತಿ ,ಕಾಳಜಿ,ಸಾಂತ್ವನ ,ಸಾಕೆಂದಿದೇವೆಯೇ ಹೊರತು,ಅವರಿಂದ ಹಣ ಅಪೇಕ್ಷೆ ಪಡಲಿಲ್ಲ ಎಂದಿಗೂ..ಯಾರ ಸಹಾಯವೂ ಇಲ್ಲದೆಯೇ ಪರಿಶ್ರಮದಿಂದಲೇ ಬದುಕಿದ ನಮಗೆ ಕಷ್ಟ ಪಟ್ಟು ದುಡಿದರೆ,ಇತಿಮಿತಿಯಿಂದ ಬದುಕಿದರೆ,ಬದುಕು ಅಷ್ಟೇನೂ ಕಷ್ಟ ಎನಿಸದು ಎಂಬ ಅರಿವು ಇದೆ....ಇದ್ದವರ ಬದುಕಿಗೆ ನಮ್ಮ ಬದುಕು ಹೋಲಿಸಿ,ಇತಿಮಿತಿಗಳ ಆಚೆ ಬದುಕ ಹೊರಟರೆ,ಬದುಕು ದುರಂತದ ಕಡೆಗೇ ಸಾಗುತ್ತದೆ.. ಹಾಗೇ,ದುಡಿಮೆಯಲ್ಲಿ ಶ್ರದ್ಧೆ ಇರಬೇಕು.. ಯಾವ ದುಡಿಮೆ ಆದರೇನು?ನಮ್ಮ ಬದುಕಿಗೆ ಆಧಾರ ಎಂಬ ಗೌರವ ಇರಬೇಕು.. ಜೊತೆಯಲ್ಲಿ ಪ್ರಾಮಾಣಿಕ ನಡೆ ಇರಬೇಕು.. ಇಷ್ಟು ಇದ್ದರೆ ಆ ಭಗವಂತ ಕೂಡ ಕೈ ಹಿಡಿದು ನಡೆಸುತ್ತಾನೆ..ಅದಕ್ಕೆ ಹಣದಿಂದ ತುಂಬಾ ದೂರ ನಾನು... ಯಾಕೆಂದರೆ...
ಹಣ,ನಂಬಿಕೆಯನ್ನು ಕಸಿದುಕೊಳ್ಳುತ್ತದೆ..ಸಂಬಂಧಗಳನ್ನು ದೂರ ಮಾಡುತ್ತದೆ ,ಹಾಗೇ ಅಪನಂಬಿಕೆ ಹುಟ್ಟು ಹಾಕಿ,ದ್ವೇಷ ಹುಟ್ಟುವಂತೆ ಪ್ರೇರೇಪಿಸುತ್ತದೆ....ಕಂಡವರ ಸ್ವತ್ತಿಗೆ ಆಸೆ ಪಡುವ ಹೇಯ ಮನಸ್ಸು ಖಂಡಿತ ಇಲ್ಲ ನಮಗೆ..😁ಹಾಗೇ ಹಣದ ಹೊಳೆ ಹರಿಸುವಷ್ಟು ಶಕ್ತಿಯೂ ಇಲ್ಲ😁.ನಾಲ್ಕು ಸಾಂತ್ವನದ ಮಾತು ಹೇಳಬಹುದು...ಒಂದೆರಡು ತಿಳಿದಂತ ಬುದ್ಧಿ ಮಾತು ಹೇಳಬಹುದು.. ಖಂಡಿತ ತಪ್ಪು ದಾರಿಯಂತೂ ತೋರಿಸಲಾರೆವು 😁ಬಂದವರಿಗೆ ತುತ್ತು ಊಟ ನೀಡಬಲ್ಲೆವು..ಒಳ್ಳೆಯದಾಗಲಿ ಎಂದು ಮನಸಾರೆ ನಿಸ್ವಾರ್ಥದಿಂದ ಹರಸಬಲ್ಲೆವು..ನಾವು,ಯಾರಲ್ಲೂ ಅಪೇಕ್ಷೆ ಪಡದೇ, ಯಾರಿಗೂ ಭಾರವಾಗದೆಯೇ ಬದುಕು ನಡೆಸುತ್ತಿರುವುದರಿಂದ ,ನಮಗೂ ಯಾರೂ ಭಾರವಾಗದಿರಲಿ ಬಂಧಗಳು ಎಂಬ ಆಶಯ ಅಷ್ಟೇ.. ನಮ್ಮವರೇ ಸಂಕಟ ಎಂದಾಗ ನಮಗೂ ಸಂಕಟ ಖಂಡಿತ ಆಗುತ್ತದೆ.. ಆದರೆ ನಾವು ನೀಡುವ ಅಲ್ಪ ಸಹಾಯ ಖಂಡಿತ ಆ ಸಂಕಟವನ್ನು ತಡೆಯಲಾಗದು..ಹಾಗಾಗಿ ನನ್ನ ದೃಷ್ಟಿಯಿಂದ ಹೇಳುವುದಾದರೆ.. ಬೆಸೆದ ಬಂಧಗಳನ್ನು ಹಣದಿಂದ ಅಳೆದು ದುರುಪಯೋಗ ಪಡಿಸಿಕೊಳ್ಳುವ ಬದಲು, ನಂಬಿಕೆಗೆ ಅರ್ಹವಾಗಿ,ಮನಸ್ಸು ಬಿಚ್ಚಿ ಮಾತಾಡುವಷ್ಟು ,ಸುಮಧುರ ಚಂದದ ಅನುಬಂಧಕೆ ಸೇತುವೆಯಾಗಿ ಇರಲಿ..ಯಾವ ನಿರೀಕ್ಷೆ, ಅಪೇಕ್ಷೆಗೂ ಒಳಪಡದೇ..