...

3 views

ಪ್ರಣಮಾಂಜಲಿ
ಪ್ರಣಮಾಂಜಲಿ ಪ್ರಣಮಾಂಜಲಿ
ಶ್ರೀ ಗುರುವೇ ಪ್ರಣಮಾಂಜಲಿ
ಸರಳತೆಯ ಬದುಕು
ನಡೆನುಡಿ ಒಂದು ಯುಗದ ಸಂತರು
ಜ್ಞಾನಯೋಗಿ ಮಹಾಂತರು
ಪೂಜ್ಯ ಶ್ರೀ ಗುರುವೇ ಪ್ರಣಮಾಂಜಲಿ
ಪ್ರಣಮಾಂಜಲಿ ಪ್ರಣಮಾಂಜಲಿ
ಶ್ರೀ ಗುರುವೇ ಪ್ರಣಮಾಂಜಲಿ
ಪರಿಶುದ್ಧ ಜೀವನ
ಕರುಣಾಮಯಿ ಮಾತೃ ಹೃದಯ
ಸಮಯಪಾಲಕ ಶಾಂತಿಪ್ರಿಯ
ಪೂಜ್ಯ ಶ್ರೀ ಗುರುವೇ ಪ್ರಣಮಾಂಜಲಿ ಪ್ರಣಮಾಂಜಲಿ ಪ್ರಣಮಾಂಜಲಿ
ಶ್ರೀ ಗುರುವೇ ಪ್ರಣಮಾಂಜಲಿ
ಪ್ರಾಣಜೀವಾಳ
ನಿಸರ್ಗ ಸೌಂದರ್ಯ ಆರಾಧಕ
ದಿವ್ಯಚೇತನ ಅನುಬಾವಿ ಸಾಧಕ
ಪೂಜ್ಯ ಶ್ರೀ ಗುರುವೇ ಪ್ರಣಮಾಂಜಲಿ ಪ್ರಣಮಾಂಜಲಿ ಪ್ರಣಮಾಂಜಲಿ
ಶ್ರೀ ಗುರುವೇ ಪ್ರಣಮಾಂಜಲಿ
ಸತ್ಯಾನುಭವ ಬಾಳು
ಸತ್ಯವೂ ಇಲ್ಲ ಅಸತ್ಯವೂ ಇಲ್ಲ
ಸಹಜವೂ ಇಲ್ಲ ಅಸಹಜವೂ ಇಲ್ಲ
ನಾನೂ ಇಲ್ಲ ನೀನೂ ಇಲ್ಲ
ಇಲ್ಲ, ಇಲ್ಲ ಎಂಬುದು ತಾನಿಲ್ಲ
ಅನ್ನುತ್ತಾ ಅನ್ನುತ್ತಾ ಬಯಲಲ್ಲಿ
ಬಯಲಾದರು ಪರಮ ಪೂಜ್ಯರು
ಗುರುದೇವ ಸಿದ್ದೇಶ್ವರ ಶ್ರೀಗಳು
ಪ್ರಣಮಾಂಜಲಿ ಪ್ರಣಮಾಂಜಲಿ
ಶ್ರೀ ಗುರುವೇ ಪ್ರಣಮಾಂಜಲಿ
ಪೂಜ್ಯ ಶ್ರೀ ಗುರುವೇ ಪ್ರಣಮಾಂಜಲಿ
ಶ್ರೀ ಗುರು ಚರಣ ಕಮಲದಲ್ಲಿ
ಅನಂತ ಅನಂತ ನಮನಾಂಜಲಿ
ಪ್ರಣಮಾಂಜಲಿ ಪ್ರಣಮಾಂಜಲಿ
© आत्मेश्वर