...

7 views

ಕವಿತೆ : ನನ್ನುಸಿರ ರಾಗಕೆ
ಕವಿತೆ : ನನ್ನುಸಿರ ರಾಗಕೆ

ನನ್ನುಸಿರ ರಾಗಕೆ
ನಿನ್ನೆದೆಯ ತಾಳ
ನನ್ಹೆಸರ ಬಳಿಯೆ ಇರಲಿ
ನಿನ್ಹೆಸರ ಮೇಳ//

ಸಾಲು ಸಾಲು ಕನಸುಗಳನು
ಪೋಣಿಸೋಣ‌ ‌ಬಾ
ಹೆಜ್ಜೆ ಮೇಲೆ ಹೆಜ್ಜೆಯಿಟ್ಟು
ನಡೆಯೋಣು ಬಾ//

ಮಾತು ಮಾತಿನಲ್ಲೂ ನಗು,
ಸಲಿಗೆ ಬೆಳೆದ ಹಾಗಿದೆ
ನಿನ್ನ ಸ್ಪರ್ಶ, ನಿನ್ನ ನೋಟ
ಮೂಕವಿಸ್ಮಿತಗೊಳಿಸಿದೆ//

ಹೊಸ ಚಿಗುರು ವಸಂತಕೆ,
ಮೈತಳೆದಿದೆ ನೋಡು
ಇಣುಕಿದರೆ ಕಾಣಸಿಗುವ
ಕೋಗಿಲೆಯ ಹಾಡು//

ನನ್ನ ನಿನ್ನ ಪರಿಚಯ
ಹೊಸತೇನು ಅಲ್ಲ..
ಏಳೇಳು ಜನುಮಕೆ ‌
ನೀನಾಗಿರು ನಲ್ಲ//

ನದಿಯಂತು ನಾಚುತಲೇ
ಹರಿದು ಕಡಲ ಸೇರುವುದು
ಕಾಡಸುಮವು ತೇಲಿ ‌ಬಂದು
ನದಿಯ ಜೊತೆಗೂಡುವುದು//

ಮುಂಗಾರಿನ ಮಳೆಹನಿಗೆ,
ಮೇಘಗಳ ಸಹವಾಸ
ನಿನ್ನ ವಿರಹದಲ್ಲಿ ನಾ
ಕುಳಿತಿರುವೆ ಉಪವಾಸ//

ಹಗಲು ಇರುಳು ಮೂಡಿ ಬರುವ
ರವಿಚಂದ್ರರ ಹಾಗೆ
ನಗುವು ಅಳುವಿನಲ್ಲೂ ನೀನು
ಬಳಿಯಿರು ಹೀಗೆ//

ಸಿಂಧು ಭಾರ್ಗವ ,ಬೆಂಗಳೂರು
ದಿನಕ್ಕೊಂದು ಕವಿತೆ
© Writer Sindhu Bhargava