...

17 views

ಒಬ್ಬಂಟಿ..
ಒಬ್ಬಂಟಿ ನೀನಿಲ್ಲಿ ಬದುಕೆಂಬ ಬಯಲಿನಲಿ,
ಯಾರ್ಯಾರು ಬರರು ನೋವಿರಲಿ ನಲಿವಿರಲಿ..

ಬರುವಾಗ ಒಬ್ಬನೇ
ಹೋಗುವಾಗಲೂ ಒಬ್ಬನೇ
ನಟ್ಟ ನಡುವಲ್ಲಿ
ಬೇಕು ಬೇಡದ ಸಾವಿರಾರು ಬವಣೆ..

ಒಬ್ಬಂಟಿ ನೀನಿಲ್ಲಿ ಬದುಕೆಂಬ ಬಯಲಿನಲಿ
ಯಾರ್ಯಾರು ಬರರು ನೋವಿರಲಿ ನಲಿವಿರಲಿ..

ಸಾವಿರದ ಆಸೆ,
ನೀಡುವುದು ಕನಸ,
ಜೊತೆಯಿರದ ಬಾಳಲ್ಲಿ
ಕ್ಷಣ ಕ್ಷಣವೂ ವಿರಸ..

ಒಬ್ಬಂಟಿ ನೀನಿಲ್ಲಿ ಬದುಕೆಂಬ ಬಯಲಿನಲಿ
ಯಾರ್ಯಾರು ಬರರು ನೋವಿರಲಿ ನಲಿವಿರಲಿ..

ತನಗಾದರಷ್ಟೆ ನೋವಿಲ್ಲಿ
ಪರರಿಗಾದುದವರ ಕರ್ಮ,
ಕಂಡು ನಗುವವರ ಮೊಗದಲ್ಲಿ
ಮೂಡುತಿಹುದಟ್ಟಹಾಸದ ಮರ್ಮ..

ಒಬ್ಬಂಟಿ ನೀನಿಲ್ಲಿ ಬದುಕೆಂಬ ಬಯಲಿನಲಿ
ಯಾರ್ಯಾರು ಬರರು ನೋವಿರಲಿ ನಲಿವಿರಲಿ..

ನೋವೆಂಬ ಗಾಯಕ್ಕು
ಮದ್ದಾಗು ನೀನು,
ನಲಿವೆಂಬ ಸಂತಸಕು
ನಗುತಿರಲು ನೀನು..

ಒಬ್ಬಂಟಿ ನೀನಿಲ್ಲಿ ಬದುಕೆಂಬ ಬಯಲಿನಲಿ...
ಯಾರ್ಯಾರು ಬರರು ನೋವಿರಲಿ ನಲಿವಿರಲಿ..

✍️ ಹಂಸಪ್ರಿಯ

#ಒಬ್ಬಂಟಿ #ಕನ್ನಡ #writco_kannada





© ✒️ ಹಂಸಪ್ರಿಯ