...

2 views

ಬಣ್ಣದ ಬದುಕು
ಬಣ್ಣದ ಬದುಕನ್ನು ಕಂಡವಳು ನಾನಲ್ಲ
ವಾಸ್ತವತೆಯ ಅರ್ಥ ಮಾಡಿಸಲು ನೀ
ಬಂದೆ

ಬಣ್ಣ ಬಣ್ಣದ ಕನಸುಗಳ ಕಂಡವಳು ನಾನಲ್ಲ
ಚಿತ್ತ ಮನಸ್ಸು ಇರಬೇಕೆಂದು ನೀ ಹೇಳಿದೆ

ಬಣ್ಣ ಬಣ್ಣದ ವಸ್ತುಗಳ ಆಸೆ ಪಟ್ಟವಳು ನಾನಲ್ಲ
ಆಸೆ ಪಡುವುದು ಮಿತಿಯಲ್ಲಿ ಇರಲಿ ಎಂದು ನೀ ಹೇಳಿದೆ .

ಬಣ್ಣಗಳ ಜೊತೆ ಆಟವಾಡಿದವಳು ನಾನಲ್ಲ
ನಮ್ಮ ಬದುಕಲ್ಲಿ ಬಣ್ಣಗಳೇ ಇಲ್ಲವೇ ಎಂದು ನೀ ಹೇಳಿದೆ

ಇನ್ನೇನು ಇದೆ ನಮ್ಮ ಬದುಕಲ್ಲಿ ಎಂದು ನಾ ಕೇಳಿದೆ
ನಮ್ಮ ಬದುಕಲ್ಲಿ ಇಡೀ ಜೀವನವಿದೆ ಇಂದು ನೀ ಹೇಳಿದೆ

🌹ಲಹರಿ🌹