...

10 views

ಹ(ಮಿ)ನಿಗವನಗಳು
ಇನ
****
ಮುಂಜಾನೆದ್ದು
ಇನನಿಗೆ ನಮಿಸಿ
ಕೆಲಸಕ್ಕೆ ಹೊರಡಿರಿ...
ಸಂಜೆಗೆ ಮನೆಯ
ಹಾದಿಯ ಹಿಡಿದು
ತಣ್ಣಗೆ ವಿರಮಿಸಿರಿ..


ವಚನ
****
ಅಕ್ಕನ ವಚನ
ಇಂದಿಗೂ ಪ್ರಸ್ತುತ..
ಬದುಕಿನ ದಾರಿಯ
ತೋರಿಸುವ ಪ್ರಣೀತ..

ನವರಾತ್ರಿ
***
ನವರಾತ್ರಿಯ ವೇಳೆ ದೇವಿಯ ಆರಾಧನೆ
ದೇಶದೆಲ್ಲೆಡೆ ವಿಧವಿಧ ಪೂಜೆ ಅರ್ಚನೆ
ದುಷ್ಟ ಶಕ್ತಿಯ ನಿರ್ಮೂಲನೆ
ಶಿಷ್ಟರ ಪೊರೆವ ಜಗನ್ಮಾತೆ..

ಯೋಧ
**

ದೇಶದ ಗಡಿಯಲಿ ಹಗಲಿರುಳು
ಮೈಯೆಲ್ಲ ಕಣ್ಣಾಗಿಸಿಕೊಂಡಿಹ
ನಮ್ಮ ಯೋಧನು..
ಪಹರೆ ಕಾಯುವ ಚತುರನು,
ಶತ್ರುಪಡೆಗಳ ಬಗ್ಗು ಬಡಿಯಲು
ತುದಿಗಾಲಲ್ಲಿ ನಿಂತಿಹನು..

ಜಾಣೆ
***
ಜಾಣೆ ನೀನು ನಮ್ಮನೆ ಪುಟ್ಟಿ
ಲಂಗ ದಾವಣಿ ನಿನಗೆ ಪ್ರೀತಿ
ಅಂದದಿ ಅಲಂಕಾರ ಮಾಡುವೆ
ಸಿರಿದೇವಿಗೆ ದಿಟ್ಟಿ ಬೊಟ್ಟೊಂದನಿಡುವೆ ..


© Writer Sindhu Bhargava