...

9 views

ಮುಗುಳು ನಗೆಗೆ...

ನಿನ್ನದೊಂದು
ಮುಗುಳು ನಗೆಯಿಂದ

ನನ್ನ ಬಾಳಿನ
ಬಾಗಿಲು ತೆರೆದಂತಾಯಿತು

ಇನ್ನೇನಿದ್ದರೂ;
ನಿನ್ನ ಅನುಮತಿಯ ಮೇರೆಗೆ

ಬದುಕಿ ಬಾಳಿ
ನಿನ್ನೆಲ್ಲ ಆಸೆ ಆಕಾಂಕ್ಷೆಗಳಿಗೆ ಸ್ಪಂದಿಸಿ
ನಾ ಬಾಳಿ ಬದುಕಬೇಕು

ನಿನ್ನದೆಲ್ಲವು ನನ್ನದೆಂದು ತಿಳಿದು
ನನ್ನದೆಲ್ಲವೂ ನಿನ್ನದೆಂದು ತಿಳಿಸಿ

ನಾವಿನ್ನೂ ಸಪ್ತಪದಿಯ ದಾರಿಯಲ್ಲಿ ನಡೆದು
ಪ್ರೇಮದ ಗುಡಿಯ ಸೇರಿ ಬದುಕು ಜಯಿಸಬೇಕು...

~ ನಾನ್ಯಾರು ✍️