...

6 views

Yeah! its an Anticipating Love
Kannada Poem
ನಿನ್ನುತ್ತರಕ್ಕಾಗಿ ಕಾಯುತಿರುವೆ..

ನಿನ್ನ ಭೇಟಿಯಾದ ಮೊದಲ‌ದಿನ
ಅದೇನೋ‌ ವಿದ್ಯುತ್ ಸಂಚಾರ..
ಮಾತುಮಾತಿನ ನಡುವೆ ನಿನ್ನ
ಕಂಗಳಲಿ‌‌ ಕಂಡೆ‌ ಚಮತ್ಕಾರ..

ಸ್ನೇಹದ ಹಸ್ತ ಚಾಚಿದ ಮೇಲೆ
ಎಲ್ಲವೂ ಒಂತರ ಅಚ್ಚರಿಯು
ನಿನ್ನಯ ಗುಣವು, ನಿನ್ನಯ ನಿಲುವು
ಮನ ಸೋಲಿಸುವಂತಹ ವೈಖರಿಯು..

ಬಗೆ ಬಗೆ ಕನಸುಗಳಿಗೆ ಬಣ್ಣ
ತುಂಬುವ ನಿನ್ನಯ ಆಸಕ್ತಿ..
ಶರಣಾದೆ ನಮಿಸುವೆ ಮನಸಾರೆ
ನೀನೇ ಸ್ತ್ರೀ ಕುಲಕೆ ‌ಶಕ್ತಿ..

ಜಯದ ನಗೆ ಬೀರಿದೊಡೆ
ನಿಲ್ಲಲಾರೆ ಒಂದು ಕಡೆ..
ನಾಳೆಯ ಬಗೆಗಿನ ಆಶಾಭಾವಕೆ
ಎಂದಿಗೂ ಬಾರದು ಅಡೆತಡೆ..

ಪ್ರೀತಿಯು ಮೂಡಿದೆ ಮನದಲ್ಲಿ
ಇದೆಯಾ ಜಾಗ‌‌ ನಿನ್ನಲ್ಲಿ?!
ಒಪ್ಪುವೆ ಎಂದು ಭಾವಿಸುವೆ
ಸ್ನೇಹಕೆ‌ ಬಡ್ತಿಯ ನಾ ಕೊಡುವೆ?!

ಇಲ್ಲ ಎನದರು ಕಣ್ಮಣಿಯೇ..
ಸಲ್ಲದು ಹೃದಯ ಒಡೆಯಲು ಎನಗೆ
ಕೊಲ್ಲುವ ಹಾಗೆ ಅನಿಸುವುದು
ಎಲ್ಲಿಯಾದರೂ, ಒಲವೊಂದಿದ್ದರೆ
ಒಪ್ಪಿಗೆ ಸೂಚಿಸು ಮಾತಿನಲಿ..

ಸಿಂಧು ಭಾರ್ಗವ ಬೆಂಗಳೂರು
ದಿನಕ್ಕೊಂದು ಕವಿತೆ.

#AnticipatingLove
© Writer Sindhu Bhargava