...

18 views

ಮೊದಲ ಪುಟದ ಪ್ರೇಮಕವನ

ಹಾರಿಹೋಯಿತು ಬರೆದ ಕವನ
ನಿನ್ನ ನೆನೆ ನೆನೆದು ಬರೆದ
ಒಲವಿನಲಿ ಜರಿದು ಬರೆದ
ಮೊದಲ ಪುಟದ ಪ್ರೇಮಕವನ
ಬಣ್ಣದ ಅಕ್ಷರಗಳಲಿ ಅನಾವರಣಗೊಂಡಿತ್ತು
ನನ್ನ ಹೃದಯದಲಿ..

ಸುಲಲಿತವಾಗಿ ಪದಗುಚ್ಚಗಳು
ಹೂವಿನ ಹಾಸಿಗೆಯಂತೆ ತೋರಣಗೊಂಡಿತ್ತು
ನನ್ನ ಕಲ್ಪನೆಯಲ್ಲಿ.
ಅಂದು ಮನಸು ಜಾರಿತ್ತು
ನಿನ್ನ ಕಂಡೊಡನೆ.

ಇಂದು ಕೈಜಾರಿತು ನನ್ನ ಪ್ರೇಮ ಪತ್ರ .
ಹಾರಿಕೊಂಡು,ತೂರಿಕೊಂಡು
ನಿನ್ನ ಅರಸಿ ಬರಬಹುದು
ಒಂದೊಮ್ಮೆ ನೋಡೋ ನೀನಿತ್ತ
ನನ್ನ ಚಿತ್ತವೆಲ್ಲಾ ನಿನ್ನತ್ತಾ....

@ದೇವಿ ✍️