...

12 views

ಮನದೊಳಗಿದೆ ಭಾವಲಹರಿ
ಝಳು ಝಳನೆ ಹರಿವ
ಈ ಪ್ರೀತಿಯ ಝರಿಯು ನಿಲ್ಲದೇ
ಓಡೋಡಿ ಬರುತ್ತಿದೆ ಹರಿದು ನಿನ್ನೆಡೆಗೆ
ಹುಡುಗ..

ಅಂತರಗದ ವೀಣೆಯು ಮೀಟುತಾ
ಹೃದಯದ ಢವ ಢವ ಮೃದಂಗ
ಸದ್ದು ಮಾಡುತ್ತಾ ಕರೆದಿದೆ ಬಳಿಗೆ ನಿನ್ನ
ಕೇಳೋ ಓ ಚೆನ್ನಾ.

ಮನದೊಳಗಿನ ಭಾವಲಹರಿಯು
ಮಿಡಿಯುತಿದೆ ನಿನ್ನ ಹೆಸರ
ಕೊಸರದಿರು ನೀಡು ಬಾ ನೀ
ಒಡಲ. ತುಂಬಾ ಪ್ರೀತಿಯ.

ಕಾದಿರುವೆ ನೆನೆಯುತ ಮಳೆಯಲಿ
ಪ್ರೀತಿಯ ಇಬ್ಬನಿಯು ಇಳಿದಿದೆ
ನಿನಗೆಂದೇ ಮೀಸಲಿಟ್ಟ ಈ ಮನದಲಿ..


ದೇವಿ ✍️