...

5 views

ಮೌನವಾಗಿ ವಿನಂತಿಸುವೆ
#SilentConfessions
#Kannadapoem

ಗೆಳೆಯ
ಮೌನವಾಗಿಯೇ ವಿನಂತಿಸುವೆ
ನಾ ನಿನಗೆ ಏನೂ ಮಾಡಲಾಗಲಿಲ್ಲ.
ಪ್ರೀತಿಯ ಉತ್ತುಂಗದಲ್ಲಿರುವಾಗಲೇ
ನಾ ನಿನ್ನ ತೊರೆಯಬೇಕಾಗಿ‌ ಬಂತು..

ನಮ್ಮ ಬದುಕು ನಮ್ಮ ಹಿಡಿತದಲ್ಲಿಲ್ಲ
ಎಂದಾಗಲೇ ಸೂತ್ರಧಾರನ ತಾಕತ್ತು ಹೆಚ್ಚುವುದು
ಬಾಯಿ ಬಾರದ ಮೂಕಿನಂತೆ
ಹೇಳಿದ್ದನ್ನ ಕೇಳಬೇಕಾಗಿ ಬರುವುದು..

ದನಿ‌ ಎತ್ತಲಾಗದೇ ಮುಮ್ಮಳ ಮರುಗುತ್ತಾ
ನಾಲ್ಕು ಗೋಡೆಯ ನಡುವೆ ಕುಳಿತಿರುವಾಗ
ನಿನ್ನ ಪ್ರೀತಿಯ ಸೆಳೆತ ಹೆಚ್ಚುವುದು..
ಒಲ್ಲದ ಮನಸ್ಸಿನಿಂದ ಹಸೆಮಣೆ ಏರುವಾಗ
ಕಣ್ಣೀರು ಸುಡುವ ಬೆಂಕಿಯಾಗುವುದು

ನೀ ಚೆನ್ನಾಗಿರು ಎಂದು ಯಾವ ಬಾಯಲ್ಲಿ ಹೇಳಲಿ..
ನಾನೇ ಇಲ್ಲಿ‌ಖುಷಿಯಿಂದ ಇಲ್ಲ..
ನಿನ್ನ ಜೊತೆಗೆ ಬದುಕುವ ಆಸೆಯು ‌ಕುಂದಲಿಲ್ಲ.
ಮತ್ತೆ‌ ಹೊಸ ಅವಕಾಶ ಆ ಸುದಿನ ಬರುವುದೋ ಕಾಯುತಲಿರುವೆ.
© Writer Sindhu Bhargava