...

14 views

ಕನಸು
ಹೇ ಕನಸೇ ನೀನಿರದ ಜಗವಿದೆಯೆ
ಹೇ ಕನಸೇ ನೀ ಸೇರದ ಮನಸ್ಸಿದೆಯೇ.

ನಿದಿರೆಗು ನಿಲುಕದೆ ಕಣ್ತೆರೆದರೆ ಕತ್ತಲಿಂದಾಚೆಗೆ ಓಡುವ ಮಿಂಚುಳ್ಳಿ ನೀ..
ಹೃದಯದ ಹಿಂಬಾಗಿಲೊಳೊಗೆ
ಅದೆಷ್ಟೋ ಆಸೆಗಳಿಗೆ ಜೀವನಿತ್ತವಳು ನೀ..

ಸಾಧಕರಿಗೊಂದು ಕನಸೆ
ಸಾಮಾನ್ಯರಿಗೊಂದು ಕನಸೆ
ಸಾಮಾನ್ಯರು ಸಾಧಕರಾಗುವೆವೆಂಬ ಕನಸೆ
ಸಾಧಕರಿಗೆ ಮತ್ತಷ್ಟು ಬೇಕೆಂಬ ಕನಸೆ..!

ಹೇ ಕನಸೆ ನಿನ್ನ ವಿಳಾಸವಾದರು ಏನೆ..?
ಹೇ ಕನಸೆ ಹೇಳು ಹುಡುಕಿ ಬರುವೆ ನಾನೆ..!

ಒಮ್ಮೆ ಹೇಳಿಬಿಡು ಕನಸೆ
ನೀನಿರದ ಜಗವಿದೆಯೆ
ನೀ ಇರದ ಮನಸ್ಸಿದೆಯೆ...



😊
© ಆತ್ಮೀಯ