...

8 views

"ಬರವಣಿಗೆ....
"ಏನೆಂದು ಬರೆಯಲಿ
ಈ ಬರವಣಿಗೆಯಲಿ

ನಾನೇನೆಂದು ವರ್ಣಿಸಲಿ
ಈ ಲೇಖನಿಯಲಿ

ಬರೆದರೂ ಓದುವರಾರು
ಅವರ ನುಡಿಗಣ್ಣಲಿ

ಬರೆದರಾಯ್ತು ಅಕ್ಷರಗಳ
ಪದಗಳ ಸಾಲಿನಲಿ

ಎಲ್ಲರೂ ಬರೆವರು
ತಮ್ಮದೇ ರೀತಿಯಲಿ

ಅವರವರ ಜೀವನದ
ಕಥೆಯಲಿ

ಕೆಲವು ರೀತಿಯ ಭಾವದಲಿ
ಬರವಣಿಗೆಯ ಕೈಯಲಿ

ಯಾರೀ ಬರಹಗಾರು
ತಮ್ಮದೇ ಲೋಕದಲಿ

ಕವಿಯಾಗಿಹರೇ ಅವರದೇ
ಶೈಲಿಯಲಿ

ಬರೆಯೋಣ ಬೆರೆಯೋಣ
ಓದಲು ಮುಂದಾಗೋಣ

ಓದುತ ಜ್ಞಾನವ ಬೆಳೆಸೋಣ
ಎಲ್ಲರ ಪ್ರೀತಿಯ ಗಳಿಸೋಣ

ಬರವಣಿಗೆಯ ಮಾಯಾಲೋಕ
ನಮ್ಮದೇ ಈ ಸುರಲೋಕ..,✍
🌟shobha 🎉