...

2 views

ನಾಲ್ಕು ಹನಿಗವನಗಳು
ಬಿತ್ತು
***
ಬಿತ್ತಿದ ಬೆಳೆಯು
ಚಿಗುರುತಲಿದ್ದರೆ
ಕೃಷಿಕನ ಎದೆಯಲ್ಲಿ
ಹೊಸನದಿಯು ಹರಿಯುದಂತೆ...
ಬೆಂಬಲ ಬೆಲೆಯು
ನೀಡುತಲಿದ್ದರೆ
ನಾಡಿನ ಜನತೆಯ
ಉದರ ಎಂದಿಗೂ
ಖಾಲಿಯಾಗದಂತೆ...

೨)
ಹಳ್ಳಿ
*****
ಮುಂಜಾನೆ ಹೊಲದಲ್ಲಿ
ಇಬ್ಬನಿಗಳ ಸಾಲುಸಾಲು
ರೈತರ ದುಡಿಮೆಯಲ್ಲಿ
ಎಂದಿಗೂ ಸಮಪಾಲು
ಕೊಕ್ಕರೆಗಿಗೆ ಆಹಾರ
ಎಂದಿಗೂ ಕೊನೆಯಾಗದು
ಉಳುಮೆ ಮಾಡುವ
ಜೋಡೆತ್ತುಗಳ ಉತ್ಸಾಹ ಕಡಿಮೆಯಾಗದು..

೩)
ಹಾಡು
***
ಹಾಡು ನಮ್ಮೆಲ್ಲ ನೋವನು ಮರೆಸುವುದು
ಖುಷಿಯಲ್ಲಿದ್ದಾಗ ಒಂದು ಗೀತೆ
ದುಃಖ ಕಳೆಯಲು ಇನ್ನೊಂದು ಗೀತೆಗೆ
ಮನಸ್ಸು ಮೊರೆ ಹೋಗುವುದು..

೪)
ನಾಡು ನುಡಿ
*******
ನಮ್ಮಯ ನಾಡು ಎಂದಿಗೂ
ಹೊಳೆವ ಬಂಗಾರದಂತೆ..
ಕನ್ನಡ ಅಕ್ಷರಗಳು ಎಂದಿಗೂ ಮುನುಗುವ ನಕ್ಷತ್ರಪುಂಜದಂತೆ..
ನಾಡು ನುಡಿ ಎಂದಾಗ ದನಿಯತ್ತಬೇಕು..
ಬತ್ತದ ಆತ್ಮಾಭಿ‌ಮಾನ ನಮ್ಮದಾಗಿರಬೇಕು..

© Writer Sindhu Bhargava