...

4 views

ಅವಳ ನೆನಪು.. !!
ಅವಳ ಸಿಹಿ ನಗುವ ಆ ಮೊಗದಲ್ಲಿ
ನನ್ನ ಕಾಡುವ ಅವಳ,
ಮುಂಗುರುಳ ಭಾವ ಬಳ್ಳಿ..!!

ಸದಾ ಸೆಳೆತ ನನಗವಳಲ್ಲಿ
ಘಮದುಂಬಿದ ಒಲವು ಅವಳ,
ಮನದ ಮಲ್ಲಿಗೆಯ ಬಳ್ಳಿ.. !!

ಎಲ್ಲಿ ನೋಡಲಲ್ಲಿ ನಾನವಳಲ್ಲಿ
ಬೆರೆತಂತಿದ್ದೆ ಆಗಲೇ ಅವಳ
ಆ ಪರಿಯ ಅವಳ ನೋಟದಲ್ಲಿ.. !!
ಅವಳ ಅನುರಾಗಿ.

© Praveen Talageri