...

4 views

ಕವನ ಸಂತೆ ಬದಿಯ
ಸಂತೆ ಬದಿಯ

ಸಂತೆ ಬದಿಯ ಬೀದಿದೀಪ
ನಿಂತಲ್ಲೇ ಬೆಳಕ‌ ಚೆಲ್ಲಿದಂತೆ
ನನ್ನ ಮನವೇಕೋ ಇಂದು ಕುಂತಲ್ಲೇ
ಕಿಟಕಿ ಕಡೆಗೆ ವಾಲಿದೆ..

ಅದೇನೇ ಇರಲಿ
ಅವನ ಮುಖ ನೋಡದೇ
ಒಂದು ಮಾತನಾಡದೇ ಹೋದರೂ
ಎದೆ ಹೊಡೆದುಕೊಳ್ಳುತಿದೆ..

ತಂಗಾಳಿ ಸೋಕಿದಂತೆಲ್ಲ
ರೋಮಾಂಚನಗೊಳಿಸುವಾತ
ಅವನೇ ಇರಬೇಕು ಮನದರಸ
ಎಂದಷ್ಟೇ ಮನ ಸಾರಿ ಹೇಳುತಿದೆ..

ಸಿಂಧು🍁 ಭಾರ್ಗವ ಬೆಂಗಳೂರು

© Writer Sindhu Bhargava