ಅಕ್ಷರ ಯುದ್ಧ.. ಟಿಪ್ಪು
ಇಷ್ಟಕ್ಕೂ ನಿಮ್ಮ ಹೀರೋ ಟಿಪ್ಪು ಮಾಡಿದ ಘನ ಕಾರ್ಯಗಳಾದರೂ ಯಾವುವು..? ಕರ್ನಾಟಕದ ಸುಪುತ್ರ ಎಂದು ಹೊಗಳಲು ಆತ ಕನ್ನಡಕ್ಕೆ ಕೊಟ್ಟಿರುವ ಕೊಡುಗೆ ಯಾವುದು..? ಪರ್ಷಿಯನ್ ಭಾಷೆಯ ಹೇರಿಕೆಯೇ..?
ಅದನ್ನು ಡಾ. ಭೈರಪ್ಪನವರು ಬಹಳ ಚೆನ್ನಾಗಿ ವಿವರಿಸಿದ್ದಾರೆ. ಮಲಬಾರಿನ ಮುಸ್ಲಿಮರು ಮಲೆಯಾಳಂ ಭಾಷೆಯನ್ನು, ತಮಿಳುನಾಡಿನ ಮುಸ್ಲಿಮರು ಮನೆಯಲ್ಲಿ ತಮಿಳನ್ನು ಇಂದಿಗೂ ಮಾತನಾಡುತ್ತಾರೆ. ಓದಿ ಬರೆಯುತ್ತಾರೆ. ಆದರೆ ಮೈಸೂರಿನ ಮುಸ್ಲಿಮರು ಇಂದಿಗೂ ಉರ್ದು ಮಾತನಾಡುವುದು, ಕನ್ನಡದಲ್ಲಿ ಓದಿ ಬರೆಯದೆ ಇರುವುದು, ಕನ್ನಡ ರಾಜ್ಯ ಭಾಷಾ ಮುಖ್ಯವಾಹಿನಿಯಲ್ಲಿ ಸೇರದೆ ಇರುವುದು ಟಿಪ್ಪು ಆರಂಭಿಸಿದ ಉರ್ದು ವಿದ್ಯಾಭ್ಯಾಸ ಪದ್ಧತಿಯಿಂದ ಎನ್ನುತ್ತಾರೆ ಭೈರಪ್ಪ. ಒಡೆಯರ ಕಾಲದಲ್ಲಿ ಆಡಳಿತ ಭಾಷೆಯಾಗಿದ್ದ ಕನ್ನಡವನ್ನು ಬದಲಿಸಿ ಭಾಷೆಯನ್ನು ತಂದವರಾರು..? ಕಂದಾಯ ಇಲಾಖೆಯಲ್ಲಿ ಹಾಸುಹೊಕ್ಕಾಗಿರುವ ಖಾತೆ, ಖಿರ್ದಿ, ಪಹಣಿ, ಖಾನೀಸುಮಾರಿ, ಗುದಸ್ತಾ, ತಖ್ತೆ, ತರಿ, ಖುಷ್ಕಿ, ಬಾಗಾಯ್ತು, ಬಂಜರು, ಜಮಾಬಂದಿ, ಅಹವಾಲು, ಖಾವಂದ್, ಅಮಲ್ದಾರ, ಶಿರಸ್ತೇದಾರ ಈ ಪದಗಳು ಎಲ್ಲಿಂದ ಬಂದವು..?
ಯಾಮ್‍ಸುಬ(ಕರಾವಳಿ ಭಾಗಕ್ಕೆ), ತರನ್‍ಸುಬಾ (ಮಲೆನಾಡಿಗೆ), ಘಬ್ರಾ ಸುಬಾ(ಬಯಲು ಸೀಮೆಗೆ) ಅನ್ನು ಶಾಸ್ವತ ಮಾಡುವುದೇ..? ಹೀಗೆ ಹೆಸರಿಟ್ಟವನ ಸರ್ಕಾರಿ ಜಯಂತಿ ಮಾಡುವ ಮೊದಲು ಈ ಪ್ರದೇಶಗಳ ಹೆಸರನ್ನು ಅಧಿಕ್ರತ ಮಾಡಬೇಕಲ್ಲವೇ.? ವೋಟಿಗಾಗಿ ವಾಲ್ಮೀಕಿಗಳನ್ನು, ಛಲವಾದಿಗಳನ್ನು, ಕೊಡವರನ್ನು ಹೊಗಳುವವರು ನೇರಾ ನೇರವಾಗಿ ಟಿಪ್ಪು ದ್ವೇಷಿಗಳು ಎಂದು ಬಹಿರಂಗ ಹೇಳಿಕೆ ಕೊಡಬೇಕಲ್ಲವೇ..? ಅದನ್ನು ಹೇಳಲು ಕಾಂಗ್ರೆಸಿಗೆ ಹೆದರಿಕೆಯೇ..? ತಾಕತ್ತಿದ್ದರೆ ವಾಲ್ಮಿಕಿಗಳನ್ನು, ಕೊಡವರನ್ನು, ಛಲವಾದಿಗಳನ್ನು ಟಿಪ್ಪು ವಿರೋಧಿಗಳೆಂದು ಹೇಳಲಿ. ನಾನಿಲ್ಲಿ ಜಾತಿ ವಿಷಯವನ್ನು ಮಾತ್ರ ಹೇಳುತ್ತಿಲ್ಲ. ಸರ್ಕಾರಿ ದಾಖಲೆ, ಕಡತಗಳಲ್ಲಿ, ಆಡಳಿತದ ವ್ಯವಹಾರಗಳಲ್ಲಿ ಕನ್ನಡ ವಿರೋಧಿ ಕೆಲಸವನ್ನೂ ಟಿಪ್ಪು ಮಾಡಿದ್ದ. ಇದೇ ರೀತಿ ಊರುಗಳ ಹೆಸರನ್ನೂ ಬದಲಿಸಿದ. ತಾನು ಹುಟ್ಟಿದ ಊರು ದೇವನಹಳ್ಳಿಯನ್ನು `ಯುಸಫಾಬಾದ್’ ಎಂದು ಬದಲಿಸಿದ. ಚಿತ್ರದುರ್ಗವನ್ನು `ಫಾರೂಕ್‍ಯಾಬ್ ಹಿಸಾರ್’ (ಶುಭಕರವಾಗಿ ವಶಪಡಿಸಿ ಕೊಳ್ಳಲಾದ ಕೋಟೆ) ಅಂತ ಬದಲಿಸಿದ. `ಗುತ್ತಿ’ಗೆ ಟಿಪ್ಪು `ಫಝ್ ಹಿಸಾರ್’, ಹಾಗೆಯೇ ಸದಾಶಿವಗಢಕ್ಕೆ `ಮಜೀದಾಬಾದ್’, ಮಂಗಳೂರಿಗೆ `ಜಮಾಲಾಬಾದ್’ ಮುಂತಾದ ಹೆಸರುಗಳನ್ನಿಟ್ಟ. ಮೈಸೂರು ನಝರಾಬಾದ್ ಆಯಿತು. ಮಡಿಕೇರಿಗೆ ಟಿಪ್ಪು ಇಟ್ಟ ಹೆಸರು ಜಾಫರಾಬಾದ್, ಸಕಲೇಶಪುರ ಮಂಜ್ರಾಬಾದ್ ಆಯಿತು. ಟಿಪ್ಪು ಜನ್ಮದಿನ ಕನ್ನಡದ ಕೊಲೆ ಮಾಡಿದ ದಿನ ಅಲ್ಲವೇ..?ಇವೆಲ್ಲವನ್ನೂ
ಡಾ. ಚಿದಾನಂದ ಮೂರ್ತಿಗಳೋ, ಭೈರಪ್ಪನವರೋ ಹೇಳಿದ್ದಲ್ಲ. ಈ ಎಲ್ಲಾ ಊರಿನ ಪ್ರತೀ ಜನರೂ ಅದನ್ನು ಇಂದಿಗೂ ಹೇಳುತ್ತಾರೆ. ಟಿಪ್ಪುವಿನ “ಕನ್ನಡ ಪ್ರೇಮ”ದ ಇತಿಹಾಸ ಇನ್ನೂ ಇದೆ. ದೂರವನ್ನು ಆಳತೆ ಮಾಡುವ ವಿಧಾನದಲ್ಲಿಯೂ ಟಿಪ್ಪು ಧರ್ಮವನ್ನು ತಂದ. ಆ ಕಾಲದಲ್ಲಿ ಭಾರತದಲ್ಲಿ ಚಾಲ್ತಿಯಲ್ಲಿದ್ದ `ಕೋಸ್’ ಎಂಬ ಅಳತೆ ಸಾಮಾನ್ಯ ಇಂಗ್ಲಿಷ್ ಕ್ರಮದಲ್ಲಿ ಎರಡು ಮೈಲಿಯಷ್ಟು ದೂರವಾಗುತ್ತಿತ್ತು. ಟಿಪ್ಪು ಈ ಕೋಸ್‍ಗಳ ಅಳತೆಯನ್ನು ಬದಲಿಸಿದ. ಕೈಯ ಒಂದು ಹೆಬ್ಬೆರಳು ಎಷ್ಟು ಅಗಲವಾಗಿರುತ್ತದೋ ಅದಕ್ಕೆ ಸರಿಯಾಗಿ ಹೊಸ ಅಳತೆ ನಿಗದಿಯಾಯಿತು. 24 ಹೆಬ್ಬೆರಳುಗಳ ಅಗಲ ಎಷ್ಟಿರುತ್ತದೋ ಅದರ ಎರಡರಷ್ಟು ಉದ್ದ ಒಂದು ಘಟಕವಾಯಿತು. ಇಸ್ಲಾಂ ಧಾರ್ಮಿಕ `ಕಲ್ಮಾಹ್’ದಲ್ಲಿ ಇಪ್ಪತ್ನಾಲ್ಕು ಅಕ್ಷರಗಳಿವೆ ಎಂಬುದೇ ಇದಕ್ಕೆ ಆಧಾರ. ಇನ್ನು ತನ್ನದೇ ಆದ ನಾಣ್ಯಗಳನ್ನು ಚಲಾವಣೆಗೆ ತಂದ ಟಿಪ್ಪು ಅವುಗಳಿಗೆ ಮುಸ್ಲಿಂ ಸಂತರ ಹೆಸರನ್ನಿಟ್ಟ. ತಾಮ್ರದ ನಾಣ್ಯಗಳಿಗೆ ಅರೇಬಿಕ್ ಮತ್ತು ಪರ್ಷಿಯನ್ ಭಾಷೆಯಲ್ಲಿ ನಕ್ಷತ್ರಗಳ ಹೆಸರಿಟ್ಟ. ಆಗಿನ ಕಾಲದಲ್ಲಿ ಚಲಾವಣೆಯಲ್ಲಿದ್ದ `ಪಗೋಡ’ ಎಂಬ ಹೆಸರಿನ ನಾಣ್ಯಗಳಿಗೆ `ಅಹ್ಮದಿ’ ಅಂತ ಹೆಸರಿಟ್ಟ. ಇದು ಪ್ರವಾದಿಯವರ ಅನೇಕ ಹೆಸರುಗಳೊಲ್ಲೊಂದು. ಎರಡು ಪಗೋಡಾ ಬೆಲೆ ಇರುವ ನಾಣ್ಯಕ್ಕೆ `ಸಾದಿಕ್’ ಎಂಬ ಹೆಸರಿಟ್ಟ. ಇದು ಮೊದಲ ಖಲೀಫರ ಹೆಸರು. ಒಂದು ಪೈಸೆ ನಾಣ್ಯಕ್ಕೆ `ಝೆಹ್ರಾ’, ಎರಡು ಪೈಸೆ ನಾಣ್ಯಕ್ಕೆ `ಔತ್ಮಾನೀ’..? ಇತ್ಯಾದಿ ಹೊಸ ಹೆಸರುಗಳನ್ನಿಡುತ್ತಾ ಹೋದ. ಕೆಲವೊಮ್ಮೆ ತಾನೇ ಇಟ್ಟ ಹೆಸರುಗಳನ್ನು ಮತ್ತೆ ಬದಲಾಯಿಸಿ ಹೊಸ ಹೆಸರಿಟ್ಟ. ಫರೂಕಿ, `ಜಾಫಾರ್ ‘ ಇತ್ಯಾದಿ ಹೆಸರಿನ ನಾಣ್ಯಗಳೂ ಇದ್ದವು. `ಹೈದರಿ’ ಎಂಬ ಹೆಸರಿನ ರೂಪಾಯಿ ಇತ್ತು. `ಇಮಾಮಿ’ ಎಂಬ ನಾಣ್ಯವೂ ಇತ್ತು. ಇಂಥ ಸಾವಿರಾರು ಉದಾಹರಣೆ ಕೊಡಬಹುದು. ಇಂಥ ವ್ಯಕ್ತಿಯನ್ನು ಕನ್ನಡದ ಕುವರ ಎನ್ನುತ್ತಾರಲ್ಲಾ ಇವರ ದುರ್ಬುದ್ಧಿಗೆ ಏನನ್ನಬೇಕು ಹೇಳಿ?
ಸ್ನೇಹಿತರೆ "ಆವರಣ" ಪುಸ್ತಕವನ್ನೂ ಓದಿ, ಮತ್ತಷ್ಟು ಚೆರಿತ್ರೆಯ ಸತ್ಯಕ್ಕೆ ಹತ್ತಿರಾಗುತ್ತೀರಾ....!!
ಅಕ್ಷರ ಯುದ್ಧ 👈👈 ಸಂಗ್ರಹ ಬರಹ
#Kannada #kannadastory #vijaykumarvm #ವಿಬೆಣ್ಣೆ
© ವಿಜು ✍ 💞