...

5 views

ನಾಥೂರಾಮ್ ಗೋಡ್ಸೆ...
ನಾಥೂರಾಮ್ ವಿನಾಯಕ್ ಗೋಡ್ಸೆ ಪುಣೆ ಜಿಲ್ಲೆಯ ಚಿತ್ಪಾವನ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಅಂಚೆ ಇಲಾಖೆ ಉದ್ಯೋಗಿ ವಿನಾಯಕ ವಾಮನರಾವ್ ಗೋಡ್ಸೆ ಹಾಗೂ ತಾಯಿ ಲಕ್ಷ್ಮೀ ಎಂಬುವವರ ಐದನೇ ಮಗನಾಗಿ ಮೇ.19 1910 ರಲ್ಲಿ ಜನಿಸಿದವರೇ ನಾಥೂರಾಮ್​ ವಿನಾಯಕ್ ಗೋಡ್ಸೆ.

ಗಾಂಧಿ ಹತ್ಯೆಯ ನಂತರ ನಡೆದ ಕೋರ್ಟ್​ ವಿಚಾರಣೆಯಲ್ಲಿ ನಾನೇಕೆ ಗಾಂಧಿಯನ್ನು ಹತ್ಯೆ ಮಾಡಿದೆ ಎಂದು ಗೋಡ್ಸೆ ತನ್ನ ಪರ ವಾದವನ್ನು ಸವಿವರವಾಗಿ ಮಂಡಿಸಿದ್ದ, ಗಾಂಧಿ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದ. ಗಾಂಧೀಜಿ ವಿರುದ್ಧ ಆತನ ತಕರಾರೆಂದರೆ?

. ಅಖಂಡ ಭಾರತ ನಿರ್ಮಾಣ ನನ್ನ ಕನಸು. ಗಾಂಧೀಜಿಯಿಂದಾಗಿ ದೇಶ ವಿಭಜನೆಯಾಗಿ ಪಾಕಿಸ್ತಾನ ನಿರ್ಮಾಣವಾಯಿತು..!

ದೇಶದ ಮೂರನೇ ಒಂದು ಭಾಗ ಆಗಸ್ಟ್ 15, 1947ರಂದು ವಿದೇಶವಾಗಿ ಹೋಯಿತು. ಅದಕ್ಕೆ ಕಾರಣ ಗಾಂಧಿ..!

ದೇಶವೇ ಸಂಕಷ್ಟದಲ್ಲಿದ್ದಾಗ ಗಾಂಧೀಜಿ ಪಾಕಿಸ್ತಾನಕ್ಕೆ 55 ಕೋಟಿ ಪರಿಹಾರ ಕೊಡಿ ಎಂದು ಉಪವಾಸಕ್ಕೆ ಕುಳಿತಿದ್ದರು ಇದು ಸರಿಯಲ್ಲ..!

ಗಾಂಧೀಜಿಯ ಮುಸ್ಲಿಂ ಓಲೈಕೆಯಿಂದಾಗಿಯೇ ದೇಶ ವಿಭಜನೆಯಾಗಿದ್ದು..!

ದೇಶ ವಿಭಜನೆಯಾಗಿ ಗಡಿಯಲ್ಲಿ ಹಿಂದೂಗಳ ಮಾರಣಹೋಮವಾಗುತ್ತಿದ್ದರೂ ಗಾಂಧಿ ಮೌನ ವಹಿಸಿದ್ದರು..!

ಪಾಕಿಸ್ತಾನದಿಂದ ಬಂದ ಹಿಂದೂ ನಿರಾಶ್ರಿತರಿಂದ ತುಂಬಿ ಹೋಗಿದ್ದ ಮಸೀದಿ ಖಾಲಿ ಮಾಡಿ ಮುಸ್ಲಿಮರಿಗೆ ಜಾಗ ಕೊಡಿ ಎಂದು ಗಾಂಧಿ ಉಪವಾಸ ಕುಳಿತಿದ್ದರು..!

ದೇಶದಲ್ಲೇ ಉಳಿದುಕೊಂಡ ಮುಸ್ಲಿಮರಿಗೆ ಆಶ್ರಯ ನೀಡಬೇಕು ಎಂದು ಗಾಂಧಿ ಒತ್ತಾಯಿಸಿದರು..!

ಪಾಕಿಸ್ತಾನದಿಂದ ಭಾರತಕ್ಕೆ ಬಂದ ನಿರಾಶ್ರಿತ ಹಿಂದೂಗಳ ಬಗ್ಗೆ ಗಾಂಧಿ ಕಿಂಚಿತ್ತೂ ಕರುಣೆ ತೊರಲಿಲ್ಲ..!

ಗಾಂಧಿಯನ್ನು ರಾಷ್ಟ್ರಪಿತ ಎನ್ನುವುದಾದರೆ ಅವರು ಆ ಸ್ಥಾನವನ್ನು ಸರಿಯಾಗಿ ನಿಭಾಯಿಸಲಿಲ್ಲ. ಗಾಂಧಿ ಪಾಕಿಸ್ತಾನದ ರಾಷ್ಟ್ರಪಿತ..!

ಗಾಂಧಿ ಇಲ್ಲದ ಭಾರತ ಶಕ್ತಿಶಾಲಿಯಾಗುತ್ತದೆ ಎಂಬ ಕಾರಣಕ್ಕೆ ಗಾಂಧಿಯನ್ನು ಕೊಂದೆ..!

ಇವು ಗಾಂಧಿ ಹತ್ಯೆಗೆ ಗೋಡ್ಸೆ ನೀಡಿದ ಸಮರ್ಥನೆ. ಆದರೆ, ನಿಜದಲ್ಲಿ ಗಾಂಧೀಜಿಯ ಬಗ್ಗೆ ನಾಥೂರಾಮನ ಸಿಟ್ಟೇನೆಂದರೆ, ಕೋಮು ದಳ್ಳುರಿಯ ಮಾರಣ ಹೋಮದಲ್ಲಿ ಗಾಂಧಿ ಪಾಲ್ಗೊಳ್ಳಲಿಲ್ಲ. ಹಿಂದೂಗಳ ಪರವಾಗಿ ಕತ್ತಿ ಎತ್ತಿ ನಿಲ್ಲಲಿಲ್ಲ ಎಂಬುದು. ಆತ ಕತ್ತಿ ಎತ್ತಿ ನಿಂತಿದ್ದ ಗಾಂಧಿಜಿಯಾದರೋ ಸತ್ಯ ಹಾಗೂ ಅಹಿಂಸೆಯ ಪರವಾಗಿ ನಿಂತಿದ್ದರು. ಎಲ್ಲರೂ ನಮ್ಮವರೇ ಎಂಬ ಗಾಂಧಿಯ ತತ್ವದ ಅಗಾಧತೆಯನ್ನು ಅದರ ವ್ಯಾಪ್ತಿಯನ್ನು ಅರ್ಥೈಸಿಕೊಳ್ಳುವಲ್ಲಿ ಗೋಡ್ಸೆ ವಿಫಲನಾಗಿದ್ದ. ಈ ನಡುವೆ ಗೋಡ್ಸೆ ಹಿಂದೂ ಧರ್ಮದ ಕಾರಣಕ್ಕೆ ಗಾಂಧಿಯನ್ನು ಕೊಂದ ಎನ್ನುತ್ತಿದೆ ಇತಿಹಾಸ. ಹಾಗಾದರೆ ನಿಜಕ್ಕೂ ನಾಥೂರಾಮ ಗೋಡ್ಸೆ ದೇಶಭಕ್ತನ..? ಅಥವಾ ದೇಶದ ಮೊದಲ ಹಿಂದೂ ಉಗ್ರಗಾಮಿಯಾ..? ಇದು ಪ್ರಸ್ತುತ ಮಿಲಿಯನ್ ಡಾಲರ್ ಪ್ರಶ್ನೆ

#Kannada #Kannadaquote #vijaykumarvm #history #ವಿಬೆಣ್ಣೆ #ಸಂಗ್ರಹ
© ವಿಜು ✍ 💞