...

3 views

"ಆಸರೆ...(ನೀತಿ ಕಥೆ)
"ನೊಂದು ಅಳುವಾಗ ಕಣ್ಣೀರ ಒರೆಸುವ ಕೈ ಯೊಂದು ಇದ್ದಾಗ ಮನಸ್ಸಿಗೆ ಆನಂದವು..,

ಒಂದು ಊರಲ್ಲಿ (ಸೋಮನಳ್ಳಿ )ಸುಮನಾ ಮತ್ತು ಚಂದ್ರ ಎಂಬ ಗಂಡ ಹೆಂಡತಿ ಇದ್ದರು ಅವರಿಗೆ ಒಂದು ಮುದ್ದಾದ ಗಂಡು ಮಗು ಇತ್ತು ತುಂಬ ಆನಂದದಿಂದ ಜೀವನ ಸಾಗಿಸುತ್ತಿದ್ದರು.

ಹೀಗಿರುವಾಗ ಒಂದು ದಿನ ಕಾಡಿನ ದಾರಿಯಲ್ಲಿ ನಡೆದು ಬರುವಾಗ ಇಬ್ಬರು ಭಯದಿಂದ ತತ್ತರಿಸಿದರು ಯಾಕೆಂದರೆ ಅವರ ಮುಂದೆ ಸಿಂಹವಿತ್ತು ಭಯದಿ ಓಡುವಾಗ ಎಡವಿ ಬಿದ್ದರು

ಅವಾಗ ಸಿಂಹವು ಅವರ ಮೇಲೆ ಎಗರಿ ಇಬ್ಬರನ್ನೂ ಕೊಂದಿತು ಇಬ್ಬರು ಮನೆಯಲ್ಲಿದ್ದ ಮಗುವನ್ನು ನೆನೆದು ದುಃಖಿಸುತ ಉಸಿರು ಬಿಟ್ಟರು ಮಗು ಅನಾಥವಾಯಿತು.,

ತಬ್ಬಲಿ ಮಕ್ಕಳಿಗೆ ದೇವರೇ ದಿಕ್ಕೆಂಬಂತೆ ಅಲ್ಲಿ ಒಬ್ಬ ಮುದುಕಿ ಹೋಗುತ್ತಿದ್ದಾಗ ಮಗು ಅಳುವ ಶಬ್ದ ಕೇಳಿ ಒಳಗೆ ಹೋಗಿ ನೋಡಿದಾಗ ಮಗುವೊಂದು ಅಳುತಿತ್ತು ಕೈಗೆತ್ತಿಕೊಂಡು ಲಾಲಿಸುತ್ತಾ..

ಮನೆಯೆಲ್ಲಾ ನೋಡಿದಾಗ ಯಾರೂ ಇರಲಿಲ್ಲಾ ಇರಲಿ ಅವರು ಬರುವವರೆಗೂ ನೋಡುವ ಎಂದು ಸುಮ್ಮನೆ ಮಗು ಲಾಲನೆ ಪಾಲನೆಯಲ್ಲಿ ತೊಡಗಿ ದಿನಗಳೇ ಉರುಳಿದವು

ಅಂದು ಅವಳಿಗೆ ಅರ್ಥವಾಯಿತು ಮಗು ಬೇಡ ಎಂದು ಬಿಟ್ಟಿರಬಹುದು ಇಲ್ಲ ಅವರಿಗೆ ಏನೋ ತೊಂದರೆ ಆಗಿರಬಹುದೆಂದು ಯೋಚಿಸಿದಳು
ಹೀಗೆ ಮಗವ ಸಾಕಿದಳು

ಮಗುವಿಗೆ ಆಸರೆಯಾದಳು ಮಗುವಿಗೆ ದಿನನಿತ್ಯ ಕಥೆ ಹೇಳುವಾಗ ದೇವರ ಬಗ್ಗೆ ಹೇಳುತಿದ್ದಳು ಮಗು ಅದನ್ನು ಸತ್ಯ ಎಂದು ನಂಬಿತು ದೇವರಿಗೆ ನಮಸ್ಕರಿಸುತ್ತಾ ಅಪ್ಪ ಅಮ್ಮನ ಕೇಳಿತು.,

ಅಳುವಾಗ ಅಲ್ಲಿಯೇ ಒಂದು ಅಶರೀರವಾಣಿ ಕೇಳಿದಾಗ ಮಗು ತುಂಬ ಹೆದರಿತು ಹೆದರಬೇಡ ಕಂದಾ ನಾನು ಎಂದು ಪ್ರತಿಧ್ವನಿ ಮತ್ತೊಮ್ಮೆ ಕೇಳಸಿತು ಯಾರೆಂದು ನೋಡಿದಾಗ ...

ದೇವರು ಪ್ರತ್ಯಕ್ಷ ಆಗಿದ್ದರು ಅದನ್ನು ನೋಡಿದ ಮಗು ಆನಂದದಿ ಹೋಗಿ ತಬ್ಬಿ ನಿಂತಿತು ಪ್ರೀತಿಯ ಅಪ್ಪುಗೆಯಲಿ ದೇವರೂ ಮೈ ಮರೆತರು ಮಗುವಿಗೆ ನೆರವಾದರು...,

ಸತ್ಯ ಅಲ್ವಾ...ತಬ್ಬಲಿ ಮಕ್ಕಳಿಗೆ ದೇವರೇ ಆಸರೆ.,✍

🙏shobha 💐