...

15 views

😊ಹಾಗೇ ಸುಮ್ನೆ ಟೈಮ್ಪಾಸ್ ದೆವ್ವದ ಕಥೆ😊
yq ವೇದಿಕೆಯಲ್ಲಿ ಬರೆದ ಬರಹ ನೆನಪಿಗೆ ಇಲ್ಲಿ ಪೋಸ್ಟ್ ಮಾಡಿದೆ 😊
ಕಥೆ 👇👇
ನನಗೆ ಹಾಲಿನ ಡೈರಿಯಲ್ಲಿ ದಿನ ಬೆಳಗ್ಗೆ 6 ರಿಂದ ಮದ್ಯಾಹ್ನ 12 ರವರೆಗೆ, 1ಬ್ಯಾಚ್ನ ಕೆಲಸ ಮುಗಿಯುತ್ತಿತ್ತು, ಹಾಗೇ ಎಂದಿನಂತೆ ಅಂದು ಕೂಡ ಮದ್ಯಾಹ್ನ ನಾನು ಮನೆಗೆ ಬರುವಾಗ 12ವರೆಯ ಸಮೀಪವಾಗುತ್ತಿತ್ತು ಮತ್ತು ಮನೆಗೆ ಹೋಗಲು ನಟ ನಟ ಬಿಸಿಲಿನ ಒಂದು ಗುಡ್ಡೆಯ ದಾರಿಯಲ್ಲಿ ಬರುತ್ತಿದ್ದ ಕಾರಣ ಯಾವಾಗಲು ಮಂಗಳವಾರ, ಶುಕ್ರವಾರ ನನಗೆ ಹೊಯ್ಗೆ ಮೈ ಮೇಲೆ ಬೀಳುತ್ತಿದ್ದಂತೆ ಬಾಸವಾಗುತ್ತಿತ್ತು, ಇದರ ನಂತರ 1 ದಿನಬಿಡದೇ ನನಗೆ ಜ್ವರ ಬರುತ್ತಿತ್ತು, ಯಾವಾಗಲು ಹೀಗೆ ಆಗುತ್ತಿತ್ತು, ಅಮ್ಮನಲ್ಲಿ ಇದರ ಬಗ್ಗೆ ಹೇಳಿದಾಗ ಅದು ದೆವ್ವದ ಕಾಟ ಒಂದು ತುoಡು ಕಬ್ಬಿಣ ಹಿಡಿದುಕೋ ಏನು ಆಗುವುದಿಲ್ಲಾ ಎಂದರು, ಆದರೇ ಇದರಲ್ಲಿ ಏನು ಪ್ರಯೋಜನವಾಗಲಿಲ್ಲ, ಹೀಗೆಯೇ ಯಾವಾಗಲೂ ಆಗುತ್ತಿದ್ದ ಕಾರಣ ನನಗೆ ಕೋಪ ಬಂದು ಒಂದು ದಿನ ಮಂಗಳವಾರ 1 ಕೆಜಿ ಸಿಮೆಂಟ್ ಹಿಡಿದುಕೊಂಡು ಅದೇ ದಾರಿಯಲ್ಲಿ, ಸಿಮೆಂಟ್ನ ಪ್ಲಾಸ್ಟಿಕ್ ಚೀಲದ ಬಾಯಿ ಓಪನ್ ಮಾಡಿ ಬರುತ್ತಲಿದ್ದೆ
ಎಂದಿನಂತೆ ಇಂದು ದೊಪ್ಪನೇ ಹೊಯ್ಗೆ ಬಂದು ನನ್ನ ಮೇಲೇ ಬಿತ್ತು, ಕೋಪದಿಂದ ಹೊಯ್ಗೆ ಬಂದ ದಿಕ್ಕಿಗೆ ಕೈಲಿದ್ದ ಸಿಮೆಂಟ್ನ ಚೀಲವನ್ನು ರಾಕೆಟ್ ನಂತೆ ಬಿಸಾಡಿದೆ,
ಸಿಮೆಂಟ್ ನ ಚೀಲda ಬಾಯಿ ತೆರೆದಿದ್ದರಿಂದ ಒಳಗಿದ್ದ ಸಿಮೆಂಟ್ ಕಾರಂಜಿಯಂತೆ ಸುತ್ತಲು ಚಿಮ್ಮಿತು,
ಹಾಗೇ ಸೀದಾ ಮನೆಗೆ ಬಂದೆ ಅರೇ ವಿಚಿತ್ರವೆಂದರೆ ಇವತ್ತು ನನಗೆ ಜ್ವರ ಬರಲೇ ಇಲ್ಲಾ.. 😍😍
ಮತ್ತು ಇನ್ನೊಂದು ದೊಡ್ಡ ಅಚ್ಚರಿಯೆಂದರೆ ಅದೇ ಕೊನೆ ಇವತ್ತಿಗೆ 1 ವರ್ಷಗಳೇ ಕಳೆದರೂ ದಿನ ಆ ದಾರಿಯಲ್ಲಿ ಬಂದರು ಇವತ್ತಿನವರೆಗೂ ಒಮ್ಮೆಯೂ ಆ ದೆವ್ವ ನನಗೂ ಮತ್ತು ಯಾರಿಗೂ ಹೊಯ್ಗೆ ಬಿಸಾಡಲಿಲ್ಲ ಎಂಬುದನ್ನು ಕೇಳಿ ಬಹಳ ಸಂತೋಷ ಪಟ್ಟುಕೊಂಡೆ,
ಹೆಚ್ಚಿನoಶ ಸಿಮೆಂಟ್ಗೆ ಹೊಯ್ಗೆಯನ್ನು ಮಿಕ್ಸ್ ಮಾಡುತ್ತಲಿರಬಹುದು 🤣🤣
ಮತ್ತು ಮಾನವೀಯತೆ ದೃಷ್ಟಿಯಿಂದ ನಿನ್ನೆ ತಾನೇನಾನು 5 ಕೆಜಿ ಸಿಮೆಂಟ್ ತಂದು ಅದೇ ಜಾಗದಲ್ಲಿ ಬಿಸಾಡಿ ಬಂದೆ 😍😍
ಖಂಡಿತಾ ನಿಮಗೆ ದೆವ್ವ ಹೊಯ್ಗೆ ಬಿಸಾಡಿದರೆ ಹೀಗೆಯೇ ಮಾಡಿ 😄😄
ನನ್ಮ ಪ್ರಕಾರ ಆ ದೆವ್ವ, ಸಾರಣೆ ಕೆಲಸಕ್ಕೆ ಹೋಗುತ್ತಿದ್ದ ದೆವ್ವ ಎಂದು ಅನುಮಾನವಿದೆ ನಿಮಗೆ ಏನನಿಸುತ್ತದೆ ಇದರ ಬಗ್ಗೆ ಖಂಡಿತಾ ಮರೆಯದೇ ತಿಳಿಸಿ, 🤩🤩🤩
ನಿಮ್ಮ ಅನಿಸಿಕೆಗಾಗಿ ಕಾಯುತ್ತ ನಿಮ್ಮ ಪ್ರೀತಿಯ fRnd🤝
✍️ HaRshiTh dReaM wRiTeR 🤝

#HaRshiTh_vR_AchaRya_ಬರಹಗಳು
#ಕನ್ನಡಬರಹ#yqjogi#Yqquotes#yqಕನ್ನಡ#ಕನ್ನಡಕಥೆ
#ದೆವ್ವದ_ಕಥೆಗಳು
ನಾ_ಬರೆದ_ಕಥೆಗಳು_harshith_dream_writer

**********-************************