...

5 views

ಅಬ್ದುಲ್ ಕಲಾಂ
ತಮ್ಮ ಸರಳ ಜೀವನ, ರಾಜಕೀಯ ಹಿನ್ನೆಲೆಯಿಲ್ಲದ ಹಾಗೂ ವಿಚಾರಧಾರೆಗಳಿಂದ ಪೀಪಲ್ಸ್_ಪ್ರೆಸಿಡೆಂಟ್' ಎಂದು
ಕಲಾಂರವರು ಜನಾನುರಾಗಿಯಾಗಿದ್ದರು.

ಪೊಖ್ರಾನ್ 2 ಅಣು ಪರೀಕ್ಷೆಯ ರೂವಾರಿ, ಅಗ್ನಿ ಮತ್ತು ಪೃಥ್ವಿ ಕ್ಷಿಪಣಿಗಳ ಹರಿಕಾರ 'ಮಿಸೈಲ್ ಮ್ಯಾನ್' ಎಪಿಜೆ ಅಬ್ದುಲ್ ಕಲಾಂ ಅವರ ಪೂರ್ಣ ಹೆಸರು ಡಾ. ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ. 2002 ರಿಂದ 2007ರ ಅವಧಿಯಲ್ಲಿ ಭಾರತದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಮಹನೀಯರು ಅಷ್ಟೇ ಅಲ್ಲ ಅವಿವಾಹಿತ ಹಾಗೂ ಶಾಕಾಹಾರಿ ಎನ್ನಿಸಿಕೊಂಡ ಭಾರತದ ಮೊದಲ ರಾಷ್ಟ್ರಪತಿ ಕೂಡ ಕಲಾಂ.

ಇಲ್ಲಿವೆ ನೋಡಿ ಅವರ ಕುರಿತ 10 ಕುತೂಹಲಕರ ಸಂಗತಿಗಳು.

1. ತಮಿಳುನಾಡಿನ ರಾಮೇಶ್ವರಂನಲ್ಲಿ ಅಕ್ಟೋಬರ್ 15, 1931ರಲ್ಲಿ ಕಲಾಂ ಜನಿಸಿದರು. ತಿರುಚಿನಾಪಳ್ಳಿಯ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ 1954ರಲ್ಲಿ ವಿಜ್ಞಾನ ಪದವಿ ಪಡೆದ ಬಳಿಕ 1957ರಲ್ಲಿ ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಎಂಐಟಿ) ಏರೋನಾಟಿಕಲ್ ಇಂಜಿನಿಯರಿಂಗ್ ಪದವೀಧರರಾದರು.

2. ರೋಹಿಣಿ ಕೃತಕ ಉಪಗ್ರಹವನ್ನು ಭೂಸ್ಥಿರ ಕಕ್ಷೆಗೆ ತಲುಪಿಸಿದ ಭಾರತದ ಮೊದಲ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಎಸ್‍ಎಲ್‍ವಿ 3) ಅಭಿವೃದ್ಧಿಯ ನೇತೃತ್ವ ವಹಿಸಿದ್ದರು ಕಲಾಂ. ಉಪಗ್ರಹಣ ಉಡಾವಣೆ ಬಳಿಕ ಭಾರತ ಸ್ಪೇಸ್ ಕ್ಲಬ್‌ಗೆ ಸೇರುವಂತಾಯಿತು.

3. ಇಸ್ರೋದಲ್ಲಿ ಎರಡು ದಶಕಗಳ ಕಾಲ ಕಾರ್ಯನಿರ್ವಹಿಸಿದ ಕಲಾಂ ಬಳಿಕ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಓ) ದೇಶೀಯ ನಿರ್ದೇಶಿತ ಕ್ಷಿಪಣಿ ಅಭಿವೃದ್ಧಿಯ ನೇತೃತ್ವ ವಹಿಸಿದ್ದರು.

4. ಅಗ್ನಿ ಮತ್ತು ಪೃಥ್ವಿ ಕ್ಷಿಪಣಿಗಳ ಅಭಿವೃದ್ಧಿ ಮತ್ತು ಪರೀಕ್ಷೆಯ ನೇತೃತ್ವ ವಹಿಸಿ ಯಶಸ್ವಿಯಾದ ಕಾರಣ ಕಲಾಂ ಅವರನ್ನು ಮಿಸೈಲ್ ಮ್ಯಾನ್ ಎಂದೇ ಕರೆಯಲಾಗುತ್ತದೆ.

5. ಕಲಾಂ ಅವರ ಮುಂದಾಳತ್ವದಲ್ಲಿ ನಡೆದ ಪೋಖ್ರಾನ್-2 ಅಣುಪರೀಕ್ಷೆ ಬಳಿಕ ಭಾರತ ನ್ಯೂಕ್ಲಿಯರ್ ಪವರ್ ರಾಷ್ಟ್ರಗಳ ಗುಂಪಿಗೆ ಸೇರುವಂತಾಯಿತು. ಯುಎಸ್‍ಎ, ಚೀನಾ, ಯುಕೆ, ಫ್ರಾನ್ಸ್ ಮತ್ತು ರಷ್ಯಾ ಮಾತ್ರ ನ್ಯೂಕ್ಲಿಯರ್ ಪವರ್ ರಾಷ್ಟ್ರಗಳು ಎನ್ನಿಸಿಕೊಂಡಿದ್ದವು. 2018ರಲ್ಲಿ ತೆರೆಕಂಡ ಬಾಲಿವುಡ್‍ ಸಿನಿಮಾ 'ಪರಮಾಣು: ದಿ ಸ್ಟೋರಿ ಆಫ್ ಪೋಖ್ರಾನ್' ಕಲಾಂ ಅವರ ಸ್ಫೂರ್ತಿಯಿಂದ ತೆರೆಗೆ ತಂದ ಸಿನಿಮಾ.

6. ಭಾರತ ಮತ್ತು ವಿದೇಶದಲ್ಲಿರುವ ವಿಶ್ವವಿದ್ಯಾಲಯಗಳಿಂದ ಇದುವರೆಗೆ 48 ಗೌರವ ಡಾಕ್ಟರೇಟ್‌ಗೆ ಪಾತ್ರರಾಗಿದ್ದಾರೆ.

7. ಭಾರತದ ನಾಗರಿಕ ಪ್ರಶಸ್ತಿಗಳಾದ ಪದ್ಮ ಭೂಷಣ 1981 ಪದ್ಮವಿಭೂಷಣ 1990 ಮತ್ತು ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ 1997 ಕಲಾಂ ಮುಡಿಗೇರಿವೆ.

8. ಭೌತಶಾಸ್ತ್ರ ಮತ್ತು ರಕ್ಷಣಾ ಕ್ಷೇತ್ರಕ್ಕಷ್ಟೇ ಅಲ್ಲದೆ ಗ್ರಾಮೀಣ ಭಾರತದ ಆರೋಗ್ಯ ರಕ್ಷಣೆಗೂ ಕಲಾಂ ತಮ್ಮ ಕೊಡುಗೆ ನೀಡಿದ್ದಾರೆ. ಹೃದ್ರೋಗ ತಜ್ಞ ಸೋಮ ರಾಜು ಅವರ ಜತೆಗೆ ಕೈಜೋಡಿಸಿ ಕಡಿಮೆ ಬೆಲೆಯ ಸ್ಟೆಂಟ್‌ಗಳನ್ನು ಅಭಿವೃದ್ಧಿಪಡಿಸಿದರು. ಬಳಿಕ ಇದು ಕಲಾಂ-ರಾಜು ಸ್ಟಂಟ್ ಎಂದೇ ಜನಪ್ರಿಯವಾಯಿತು.

9. ಏಳು ವರ್ಷಗಳ ಕಾಲ 1992 ರಿಂದ 1999 ಪ್ರಧಾನಿ ಅವರ ಮುಖ್ಯ ವೈಜ್ಞಾನಿಕ ಸಲಹೆಗಾರ ಹಾಗೂ ಡಿಆರ್‌ಡಿಓ ಸೆಕ್ರೆಟರಿಯಾಗಿದ್ದರು.

10. 2002 ರಲ್ಲಿ ಲಕ್ಷ್ಮಿ ಸೆಹ್ಗಲ್ ಅವರನ್ನು ಸೋಲಿಸುವ ಮೂಲಕ ರಾಷ್ಟ್ರಪತಿ ಹುದ್ದೇಗೇರಿದರು. ತಮ್ಮ ಸರಳ ಜೀವನ, ರಾಜಕೀಯ ಹಿನ್ನೆಲೆಯಿಲ್ಲದ ಹಾಗೂ ವಿಚಾರಧಾರೆಗಳಿಂದ 'ಪೀಪಲ್ಸ್ ಪ್ರೆಸಿಡೆಂಟ್' ಎಂದು ಕಲಾಂರನ್ನು ಜನಾನುರಾಗಿಯಾಗಿದ್ದರು.

#Kannada #vijaykumarvm #story #ವಿಬೆಣ್ಣೆ

© ವಿಜು ✍ 💞