...

3 views

"ತಬ್ಬಲಿ ಮಗುವಿನ ಕಥೆ....
"ರಾಮಾಪು ಎಂಬ ಗ್ರಾಮದಲ್ಲಿ ಶಾಂತಿ ಎಂಬಾಕೆ ತಂದೆ (ರಮೇಶ) ತಾಯಿ (ಶಾರದ) ಇವರಿಗೆ
ಒಬ್ಬ ಳೇ ಮಗಳು ಆಟ ಪಾಟದಲ್ಲಿ ಮುಂದು ಓದಿನಲ್ಲೂ ಮುಂದು ಇವರದು ಸುಂದರ ಕುಟುಂಬ.

ಪುಟ್ಟ ಹುಡುಗಿ ಚೆನ್ನಾಗಿ ಓದುತ್ತಾ ಶಾಲೆಗೆ ಕೀರ್ತಿಯ ತರುತ್ತಾ ತನ್ನದೇ ಪುಟ್ಟ ಪ್ರಪಂಚದಿ ನಲಿ ಕಲಿ ಯಲಿ ಸಂತೋಷದಿ ಜೀವನ ಸಾಗಿಸುತ್ತಿರುವಾಗ ತಂದೆ ತಾಯಿಯಯು ಗಾಡಿಗಳ ಅಪಗಾತದಲ್ಲಿ ತೀರಿ ಹೋಗುತ್ತಾರೆ,

ತಬ್ಬಲಿಯಾದ ಶಾಂತಿಗೆ ಬಂದುಬಳಗ ಯಾರು ಇರುವುದಿಲ್ಲ ಹೀಗಿರುವಾಗ ಅಲ್ಲಿ ಇಲ್ಲಿ ಬೇಡಿ
ತಿನ್ನುತಾ ಬದುಕು ಸಾಗಿಸುತ್ತಿರುವಾಗಾ ಅಲ್ಲಿಯೇ
ದಿನಾ ನೋಡುತಿದ್ದ ಒಬ್ಬ ಟೀಚರ್ (ಸ್ನೇಹ)

ಅವಳನ್ನು ಕನಿಕರದಿಂದ ಮನೆಗೆ ಕಳೆದುಕೊಂಡು
ಹೋಗುತ್ತಾರೆ ಅವರಿಗೂ ಯಾರಿಲ್ಲದ ಕಾರಣ ಶಾಂತಿಯನ್ನು ತನ್ನ ಮಗಳಂತೆ ವಿದ್ಯಾಭ್ಯಾಸ ಕೊಡಿಸಿ ಬೆಳೆಸುತ್ತಾರೆ.

ಮುದ್ದಿನ ಮಗಳಾಗಿ ಬೆಳೆದ ಶಾಂತಿ ಪ್ರೀತಿಯಲ್ಲಿ
ಬೀಳುತ್ತಾಳೆ ಸಾಗರ್) ಎಂಬಾತನ ಜೊತೆ ಹೀಗಿರುವಾಗ ತಾಯಿಗೆ ತಿಳಿಯುತ್ತದೆ ಮಗಳನ್ನು ಕರೆದು ಕೇಳುತ್ತಾಳೆ ಯಾರದು ಮಗಳೇ ಎಂದು

ಸಾಗರ್ ಎಂಬಾತನು ನಾನು ತುಂಬಾ ಇಷ್ಟಪಟ್ಟಿದ್ದೇನೆ ಮದುವೆ ಆಗಬೇಕೆಂದಿದ್ದೇವೆ ಎಂದು ಎರಡು ಮಾತಾಡದೆ ಇಬ್ಬರ ಮದುವೆ ಮಾಡಿ ಮುಗಿಸುತ್ತಾಳೆ ತಾಯಿ.

ಹೀಗಿರುವಾಗ ಒಂದು ದಿನ ಕರೆ ಬರುತ್ತದೆ ನಿನ್ನ ಗಂಡ ಹೃದಯಾಘಾತದಿಂದ ತೀರಿ ಹೋದರು ಎಂದು
ಕ್ಷಣಕಾಲವು ಅವಳ ಸಂತೋಷ ಉಳಿಯಲಿಲ್ಲ
ಮರಳಿ ತಾಯಿ ಮನೆಗೆ ಬರುತ್ತಾಳೆ,

ತಾಯಿ ಚೆನ್ನಾಗಿ ಒದಿದ್ದ ಶಾಂತಿಗೆ ತನ್ನ ಶಾಲೆಯಲ್ಲಿ
ಟೀಚರ್ ಆಗಿ ಕೆಲಸ ಕೊಡಿಸುತ್ತಾಳೆ ತಾಯಿ ತನಗಾಗಿ ಕಷ್ಟ ಪಟ್ಟಿದ್ದು ಸಾಕೆಂದು ತಾಯಿಯನ್ನು
ವಿಶ್ರಾಂತಿ ಪಡೆಯಲು ಹೇಳುತ್ತಾಳೆ ಹೀಗೆ

ತಾಯಿಗೆ ನೆರವಾಗಿ ಅವಳ ಕಷ್ಟಕ್ಕೆ ಭಾಗಿಯಾಗಿ
ತಾಯಿಗೆ ತಾಯಾಗಿ ಚೆನ್ನಾಗಿ ನೋಡಿಕೊಳ್ಳುತ್ತಾ ತನ್ನ ಎಲ್ಲಾ ನೋವನ್ನು ಮರೆತು ಗಂಡನ ನೆನಪಲ್ಲಿ ಸುಂದರ ಕ್ಷಣಗಳ ಮೆಲುಕು ಹಾಕುತ್ತಾ ಸಂತಸದ ಜೀವನವನ್ನು ಸಾಗಿಸುತ್ತಾಳೆ..,✍
🥰shobha🌼