...

1 views

ಹಣವೇ ಬದುಕಲ್ಲ ಗೆಳೆಯರೇ
ಕಥೆ :ಹಣದ ಮರ

ಮರ ಎಂದಾಗ ಹಸಿರು ಎಲೆ, ಹಣ್ಣು, ಕಾಯಿ, ರೆಂಬೆ, ಕೊಂಬೆ, ಎನ್ನುವ ಚಿತ್ರ ನಮ್ಮ ಕಣ್ಣಮುಂದೆ ಬರುತ್ತದೆ. ಆಸರೆ ನೀಡುತ ತ್ಯಾಗಮಾಡುವ ನಿಸ್ವಾರ್ಥ ಜೀವಿ ಎಂದು ನಾವು ಇಲ್ಲಿಯ ತನಕ ಬದುಕಿನುದ್ದಕ್ಕೂ ಸ್ಮರಿಸುತ್ತಾ ಬೆಳೆದಿದ್ದೇವೆ. ಆದರೆ ಇತ್ತೀಚೆಗೆ ದುರಾಸೆಯ ಗೋಡೆಯನ್ನು ಸುತ್ತಲೂ ಕಟ್ಟಿರುವ ಮನುಜನ ಮನದಂಗಳದಲಿ ಬೇರೂರಿ ಚಿಗುರೊಡೆಯುತ್ತಿರುವ ಸಮಾಜದ ಒಂದು ಪರಿಸ್ಥಿತಿಯ ರೂಪವೇ ಹಣದ ಮರ.
ಇಂದಿನ ಕಾಲದಲ್ಲಿ ದುಡ್ಡಿದ್ದವನೇ ದೊಡ್ಡಪ್ಪ. ಹಣವಿಲ್ಲದವನು ಹೆಣಕ್ಕೆ ಸಮಾನ, ಎನ್ನುವ ಗಾದೆಯ ಸತ್ಯ ಸ್ವರೂಪವನ್ನು ಕಾಣಬಹುದು. ಹಣ್ಣಿರುವ ಮರಕ್ಕೆ ಎಷ್ಟು ಮರ್ಯಾದೆ ಆರೈಕೆಯೋ ಹಾಗೆ ಹಣವಿರುವ ಮನುಜನಿಗೆ ರಾಜ ಮರ್ಯಾದೆ, ಯಾವ ಹಾದಿಯ ತುಳಿದು ಹಣ ಗಳಿಸಿದ ಎನ್ನುವುದಕ್ಕಿಂತ ಹಣ ಎಷ್ಟು ಲಕ್ಷ ಕೋಟಿ ಇಟ್ಟಿದ್ದಾನೆ ಎನ್ನುವುದೇ ಬಹು ಮುಖ್ಯ. ಇಂತಹ ಒಂದು ಪರಿಸ್ಥಿತಿಯಲ್ಲಿ ಶ್ರಮವೇ ಇಲ್ಲದೆ ಗಳಿಸುವ ಒಂದು ದಾರಿ ಸಿಕ್ಕರೆ ಎಷ್ಟು ಚೆಂದ ಅಂತಹ ಒಂದು ಸದಾ ಮನುಜಕುಲ ಬಯಸಿಯೇ ತೀರುವ ಒಂದು ಮನುಜ ಕಾಲ್ಪನಿಕ ಸೃಷ್ಠಿ ಎಂದರೆ ಅದು ಹಣದ ಮರ. ಅದೆಷ್ಟು ಅದ್ಭುತ ಪರಿಕಲ್ಪನೆ, ವಾಸ್ತವದಲ್ಲಿ ನಿಜವಾದರೆ ವಾಹ್! ಅದೆಷ್ಟು ಚೆನ್ನ, ಭಿಕ್ಷುಕ ಬೇಡುವುದನ್ನು
ನಿಲ್ಲಿಸುತ್ತಾನೆ, ಅನಾಥ ಸಂಭಂಧಗಳಲ್ಲಿ ಬೆಸೆಯುತ್ತಾನೆ, ಸಿರಿವಂತನ ಆಸೆ ಕೊನೆಗೊಳ್ಳಬಹುದೆನೋ? ಬಡವ ಸಿರಿತನದ ಹಾದಿಯನ್ನು ಹಿಡಿಯಬಹುದು...