...

6 views

ಆ ನೀಲಿ ಕಣ್ಣು


ಹಾಗೆ ಮನಸ್ಸಿಗೆ ಬೇಸರವಾಗಿ ನಡೆಯುತ್ತಿದ್ದೆ ಕತ್ತಲಾಗಿದ್ದೆ ಗೊತ್ತಾಗಲಿಲ್ಲ ಏನೋ ಯೋಚಿಸುತ್ತ ಕುಳಿತಿದ್ದೆ ಅಷ್ಟರಲ್ಲೆ ಅಲ್ಲೊಬ್ಬ ಮಹಿಳೆ ಅಳುತ್ತಿದ್ದಿದ್ದು ಕಿವಿಗೆ ಬಿತ್ತು ಮಾತಾಡಿಸುವ ಅಂತ ಏನಮ್ಮಾ ಯಾಕೆ ಅಳುತ್ತಿರುವೆ‌ ಎಂದು ಕೇಳಿಬಿಟ್ಟೆ ಅವಳು ನನ್ನ ಒಮ್ಮೆ ತಲೆ ಎತ್ತಿ ನೋಡಿದಳು ಕಣ್ಣೋರೆಸುತ್ತಾ ಹಾಗೆ ತೊದಲಿಸುತ್ತಾ ನನ್ನ ಹೆಸರು ಪರಿ ಎಂದಳು... ಆಹಾ!ಅವಳೊಂದು ಅಪ್ಸರೆಯಂತಿದ್ದಳು ಆ ನೀಲಿ ಕಣ್ಣುಗಳು ಮಾತಾಡಿದವು ಕಂಬನಿಸುರಿಸುತ್ತಲೆ!..

ನಾನೊಬ್ಬಳು ನತದೃಷ್ಟೇ ಏನೆಂದು ಹೇಳಲಿ ನನ್ನ ಗೋಳು ನೀವು ನಡೆಯಿರಿ ಸುಮ್ಮನೆ ಎಂದಳು.. ಆದರೆ ನಾನು ಮತ್ತೆ ಹೇಳಿದೆ ಹಾಗೆನಿಲ್ಲ ನೀನು ಹೇಳು ಏನಾಯಿತು ನಿನಗೆ ಏಕೆ ಇಷ್ಟೋಂದು ರೋಧನೆ ಹೇಳು ಏನಾಯಿತು... ಎಂದು ಮತ್ತೆ ಮತ್ತೆ ಕೇಳಿದೆ... ಆಗ ಅವಳು ತಡವರಿಸುತ್ತಾ ಮಾತಾಡತೊಡಗಿದಳು ಈ ನನ್ನ ಮುಖದ ಚೆಲುವು ‌ನನ್ನ ಜೀವನವ ಹಾಳು ಮಾಡಿಬಿಟ್ಟಿತು..ಸುಂದರವಾಗಿರುವುದೇ ಶಾಪವಾಯಿತು ಎನಗೆ ಎಂದಳು ಅಯ್ಯೋ!..ಏಕೆ ಏನಾಯಿತು ಅಂತಾ ಪರಿಸ್ಥಿತಿ ನನ್ನಲ್ಲಿ ಹೇಳಿ ಮನಸು ಹಗುರ ಮಾಡಿಕೊಳ್ಳಿ ಎಂದು ಹೇಳಿದೆ... ಮಾತು ಮುಂದುವರಿಸುತ್ತಾ ....ಹೇಳಿದಳು ಾನಾನೊಬ್ಬಳು ಅದ್ಭುತ ನಟಿಯಾಗ ಬೇಕೆಂದು ಕೊಂಡೆ ಆದರೆ.... ನನ್ನ ಸ್ವಂತದವರೆ ಎನ್ನ ಕನಸುಗಳನ್ನು ನನ್ನನ್ನು ಕೊಂದು ಹಾಕಿದರು... ಬೇಕಾದ ರೀತಿಯಲ್ಲಿ ಪರಿಪರಿಯಾಗಿ ಹಿಂಸಿ‌ಸಿ ಕಿತ್ತು ತಿಂದರು ಹೇಳುತ್ತಾ ಜೋರಾಗಿ ಅತ್ತಳು....

ಅವಳ ಕಣ್ಣೀರು ಕಂಡು ಎನಗೇನು ಹೇಳಬೇಕೋ ತಿಳಿಯಲಿಲ್ಲ ಕೊಂದರೂ ಅಂದಳಲ್ಲವೇ!? ಮತ್ತೆ ನನಗೆ ಹೇಗೆ ಮಾತಾಡಿಸಿದಳು ಎಂದು ಯೋಚನೆ ಆಯಿತು! ಹೋ..! ನೋವಿನಿಂದ ಹಾಗಂದಿರಬೇಕೆಂದು...