...

6 views

ಆ ಕರ್ಣನಂತೆ (ಸಣ್ಣ ಕಥೆ )
ಇಳಿ ಸಂಜೆ ಸೂರ್ಯನ ನಿರ್ಗಮನ ವೀಕ್ಷಿಸುತ ಕೈಲಿರುವ ಸಿಗರೇಟ್ಇಂದ ಸುರುಳಿಯಾಕರವಾಗಿ ಹೊಗೆಚೆಲ್ಲುತ್ತ ಕಡಲಿನ ಅಬ್ಬರ ವೀಕ್ಷಿಸುತ ನಿಂತ ಕರ್ಣನಿಗೆ ಯಾಕೋ ಇಂದು ಸಮುದ್ರ ಎಂದಿನಂತೆ ಆರ್ಭಟೀಸದೆ ತನ್ನನ್ನೇ ಮರೆತು, ಅಂಜಿಕೆಯಲಿ ನಿಂತತೆ ತೋರಿತು... ಹೌದು ತನ್ನ ಬಹುಪಾಲು ಸಮಯ ಸಮುದ್ರ ತೀರದಲ್ಲಿ ನಿಂತು ಮನಸೋಇಚ್ಛೆ ಬೈಯುತಿದ್ದ ಕರ್ಣ ತನ್ನ ಮನದೊಳಗಿನ ದುಃಖವನ್ನು ಕಣ್ಣೀರಿನ ಮೂಲಕ ಹೊರ ಹಾಕುತ್ತಿದ್ದ.. ಇಂದಿಗೆ ಇಪ್ಪತೈದು ವರ್ಷಗಳ ಹಿಂದೆ ಕರ್ಣನ ಜನನ ಇದೇ ಸಮುದ್ರ ತಟದಲ್ಲಿ.. ಹೆತ್ತಬ್ಬೆ ಯ ನಿರೀಕ್ಷೆಯಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕ ತೊಡಗಿದ ಕರ್ಣ.. ಯಾವ ಹೆಣ್ಣುಮಗಳೋ ಗೊತ್ತಿಲ್ಲ, ಮಾಂಸದ ಮುದ್ದೆಯಂತಿದ್ದ ನನ್ನನ್ನು ಇದೆ ಕರಿಬಂಡೆಯ ನಡುವೆ ಮಲಗಿಸಿ ಯಾರಿಗೂ ಹೇಳದೆ ಮಾಯವಾಗಿದ್ದು, ಅಲ್ಲಿಯೇ ಪಕ್ಕದಲಿ ಮೀನುಹಿಡಿಯುತಿದ್ದ ಮಾದನಿಗೆ ಮಗುವಿನ ಅಳು ಕೇಳಿಸಿದ್ದು ಎಲ್ಲವೂ ಕಾಕತಾಳಿಯ, ಮರಕ್ಕೆ ಹಣ್ಣುಭಾರವೋ .... ಹೆಣ್ಣಿಗೆ ಮಗುವು ಭಾರವೋ ಗೊತ್ತಿಲ್ಲ.. ಮುಂದೆ ಕರ್ಣನಿಗೆ ಬಾಲ್ಯ ಸುಖವೆಲ್ಲಾ ಮಾದನ ಜೊತೆ.,. ಅವರಿವರಿಂದ ಕೇಳಿಸಿಕೊಂಡ ತನ್ನ ಹುಟ್ಟಿನ ಕಥೆಗೆ ಅದೆಷ್ಟೋ ಅತ್ತಿದ್ದ... ಹೆಪ್ಪಾಗಿ ಮಡುವುಗಟ್ಟಿದ್ದ ತನ್ನೆಲ್ಲ ನೋವುಗಳನ್ನು ನೀರಲ್ಲಿ ತೇಲಿ ಬಿಟ್ಟಿದ್ದ... ಎಷ್ಟೋ ಬಾರಿ ಮನ ಬಂದಂತೆ ಕಡಲಿನ ಸುಳಿಗೆ ಹಿಡಿಶಾಪ ಹಾಕಿದ್ದ...ನಿನ್ನ ಬೋರ್ಗೆರತಕೆ ನನ್ನ ಅಳುವಿನ ಧ್ವನಿ ಕೇಳಿಸಿರಲಿಲ್ಲವೇ....ಆ ದಿನ ನೀ ನನ್ನ ಹೊತೈದಿದ್ದರೆ ಕರ್ಣನ ಜನ್ಮಕೆ ಕಥೆ ಹುಟ್ಟುತಿರಲಿಲ್ಲ... ಕುಂತಿಗೆ ಬೇಡದಿದ್ದ ಕರ್ಣ ನಿನಗೇಕೆ ಮನದಲ್ಲೇ ಸಮಾಧಾನ ಗೊಂಡಿದ್ದ..ಯಾರು ಏನೆಂದರೂ ವಿಧಿ ತನ್ನ ಕ್ರಿಯೆಯನ್ನು ಸಲೀಸಾಗಿ ಮಾಡಿದ... ಊರವರ ದಾನಿಗಳ ಸಹಾಯದಿಂದ ವಿದ್ಯಾಭ್ಯಾಸ ಪೂರ್ಣಗೊಳಿಸಿ ಪ್ರತಿಷ್ಟಿತ ಕಂಪೆನಿಯಲಿ ಕೆಲಸಕ್ಕೂ ಸೇರಿದ್ದ.. ಮಾದನ ಮಗನಾಗಿ ಊರವರ ಹೆಮ್ಮೆಯ ಪುತ್ರನಾದ ಕರ್ಣನಿಗೆ ಕುಂತಿಯ ಪ್ರೀತಿ ವಾಸಲ್ಯ ಮರೀಚಿಕೆಯಾಗಿತ್ತು..

----ಶ್ರೀವಿ -